ಸರ್​ಪ್ರೈಸ್ ಗಿಫ್ಟ್​ನಿಂದ ಯಶ್​ ಫುಲ್​ ಖುಷ್​

Published on

397 Views

KGF ಚಿತ್ರದ ನಂತ್ರ ಸ್ಯಾಂಡಲ್ ವುಡ್ ನಲ್ಲಿ ರಾಕಿಭಾಯ್ ಹವಾ ಸ್ವಲ್ಪ ಜೋರಾಗಿದೆ. ಅಲ್ಲದೇ ಅವರ ಅಭಿಮಾನಿ ಬಳಗವು ದುಪ್ಪಟ್ಟಾಗಿದೆ. ಇದೀಗ ಮತ್ತೆ ರಾಕಿ ಭಾಯ್ ಚಿನ್ನದ ಮೀನಿನ‌‌ ಬೇಟೆಯಲ್ಲಿದ್ದು, ಸದ್ಯ ಮೈಸೂರಿನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಈ ಬ್ಯುಸಿ ಶೆಡ್ಯೂಲ್ ನಲ್ಲೂ ರಾಮಚಾರಿ “ಯುವರತ್ನ” ನ ಭೇಟಿ ಮಾಡಿದ್ರು. ಜೊತೆಗೆ ಕೆಜಿಎಫ್​ ಚಾಪ್ಟರ್ 1 ಚಿತ್ರದ ಸಹಾಯಕ ನಿರ್ದೇಶಕನ ಹೊಸ ಕಾರು ಡ್ರೈವ್ ಮಾಡಿ ಸರ್ ಪ್ರೈಸ್ ಕೊಟ್ಟಿದ್ದರು. ಆದರೆ, ಈಗ ಈ ರಾಜಹುಲಿಗೆ ಅಭಿಮಾನಿಗಳಿಬ್ರು ಸರ್​ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ.

ರಾಕಿಭಾಯ್ ನ ಫಾಲೋವರ್ಸ್​ ‌ರಾಕಿಭಾಯ್ ಪೇಂಟಿಂಗ್ ಮಾಡಿ, ಅದನ್ನೂ ಕೆಜಿಎಫ್ ಶೂಟಿಂಗ್ ಸ್ಥಳಕ್ಕೆ ತೆರಳಿ ಯಶ್​ಗೆ ನೀಡಿದ್ದಾರೆ. ಇನ್ನೂ ಈ ಸರ್​ಪ್ರೈಸ್ ಗಿಫ್ಟ್​ನಿಂದ ಪುಲ್ ಖುಷ್ ಆಗಿರುವ ಯಶ್​, ಅಭಿಮಾನಿಗಳ ಜೊತೆ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com