ಸುಶಾಂತ್ ಸಿಂಗ್ ಪ್ರಕರಣದಲ್ಲಿ ಮಹತ್ವದ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ವಿಚಾರಣೆಯ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ದಾಖಲಿಸಲಾಗಿತ್ತು. ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ, ಅವರ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ ಹೆಸರಿನಲ್ಲಿ ಅವರ ತಂದೆ ಕೆ.ಕೆ.ಸಿಂಗ್ ಮಾಡಿದ ಎಫ್ಐಆರ್ ನಂತರ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಸುದ್ದಿ ಬಂದಾಗಿನಿಂದ, ಸೋಷಿಯಲ್ ಮೀಡಿಯಾದಲ್ಲಿ ಸ್ವಜನ ಪಕ್ಷಪಾತದಿಂದಾಗಿ ಅನೇಕ ಖ್ಯಾತನಾಮರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದರು. ಮುಂಬೈ ಪೊಲೀಸರ ಜೊತೆಗೆ, ಈಗ ಬಿಹಾರ ಪೊಲೀಸರು ಕೂಡ ಆತ್ಮಹತ್ಯೆಗೆ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದಾರೆ.
ಬಿಹಾರದ ಪೊಲೀಸ್ ಅಧಿಕಾರಿಯೊಬ್ಬರು ಈ ಪ್ರಕರಣದ ಬಗ್ಗೆ ಮಾತನಾಡುತ್ತ, ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ, ಸುಶಾಂತ್‌ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನೂ ಪೊಲೀಸರು ವಿಚಾರಣೆ ನಡೆಸಬಹುದು ಎಂದು ಹೇಳಿದ್ದಾರೆ. ಜುಲೈ 25 ರಂದು ಬಿಹಾರದ ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ.ಸಿಂಗ್ ದಾಖಲಿಸಿದ ಎಫ್‌ಐಆರ್‌ನಲ್ಲಿ, ಇಂದ್ರಜಿತ್ ಚಕ್ರವರ್ತಿ, ಸಂಧ್ಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ, ಸ್ಯಾಮ್ಯುಯೆಲ್ ಮಿರಿಂಡಾ, ಶ್ರುತಿ ಮೋದಿ ವಿರುದ್ಧ ದ್ರೋಹ, ವಂಚನೆ, ಒತ್ತೆಯಾಳಾಗಿ ಇಟ್ಟುಕೊಂಡ ಹಾಗು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಬಿಹಾರ ಪೊಲೀಸ್ ತಂಡಕ್ಕೆ ಸಹಾಯ ಮಾಡಲು ಮುಂಬೈ ಪೊಲೀಸರು ಸಿದ್ಧರಿಲ್ಲ. ಸುಶಾಂತ್ ಪ್ರಕರಣವನ್ನು ತನಿಖೆ ನಡೆಸಲು ಮುಂಬೈಗೆ ಬಂದ ಬಿಹಾರ್ ಪೋಲಿಸ್ ಅಧಿಕಾರಿಗಳಿಗೆ ಮುಂಬೈ ಪೋಲಿಸ್ ಸಹಕಾರ ನೀಡದ ಕಾರಣ ಜುಲೈ 30 ರಂದು ಬಿಹಾರ ಪೊಲೀಸ್ ಅಧಿಕಾರಿಗಳು ಮುಂಬೈನಲ್ಲಿ ಆಟೋದಲ್ಲೇ ಸುತ್ತಾಡಿದರು. ಅವರಿಗೆ ಸರ್ಕಾರಿ ಕಾರನ್ನು ಸಹ ನೀಡಲಾಗಿಲ್ಲ. ಆದರೆ ಬಿಹಾರ ಪೊಲೀಸರು ಕೂಡ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. HDFC, Kotak Mahindra ಮತ್ತು ICICI ಬ್ಯಾಂಕ್ ಅಧಿಕಾರಿಗಳನ್ನು ಬಿಹಾರ ಪೊಲೀಸರು ಪ್ರಶ್ನಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ಆರು ಬ್ಯಾಂಕ್ ಅಧಿಕಾರಿಗಳ ಹೇಳಿಕೆಗಳನ್ನು ಸಂಗ್ರಹಿಸಿದ್ದಾರೆ.
BIHAR police Traveling by Auto Rikshaw In MUMBAI.
Why Not…. Maha Govt Support Bihar Police For Investigation ??
Salute Bihar Police For Nice Job.@NitishKumar @ZeeBiharNews@republic @AHindinews#ShameOnMumbaiPolice pic.twitter.com/kuuASfUPdd
— Ravi Tiwari Bihari (@iRaviTiwari) July 30, 2020
ಬಿಹಾರ ಪೊಲೀಸ್ ತಂಡದ ನೇತೃತ್ವವನ್ನು ಬಿಹಾರ ಪೊಲೀಸ್ ತಂಡದ ಇನ್ಸ್‌ಪೆಕ್ಟರ್ ಮನೋಹರ್ ಭಾರತಿ ವಹಿಸಿಕೊಂಡಿದ್ದಾರೆ. ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದ ನಂತರ ಪೊಲೀಸ್ ತಂಡ ಸುಶಾಂತ್ ಅವರ ಎಕ್ಸ್ ಗರ್ಲ್ ಫ್ರೆಂಡ್ ಅಂಕಿತಾ ಲೋಖಂಡೆ ಅವರನ್ನು ಸುದೀರ್ಘ ವಿಚಾರಣೆ ನಡೆಸಿ ಸುಶಾಂತ್-ರಿಯಾ ಅವರ ಸಂಬಂಧದ ಬಗ್ಗೆ ವ್ಯಾಪಕವಾಗಿ ತನಿಖೆ ಮಾಡಿತು. ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಮಿತು, ಅವರ ಕುಕ್, ಡ್ರೈವರ್, ಸ್ಟಾಫ್ ಮತ್ತು ಸ್ನೇಹಿತನ ಹೇಳಿಕೆಯನ್ನು ಪೊಲೀಸ್ ತಂಡ ದಾಖಲಿಸಿದೆ. ಇತ್ತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದೆ. ಈ ಪ್ರಕರಣವನ್ನು ಪಾಟ್ನಾದಿಂದ ಮುಂಬೈಗೆ ವರ್ಗಾಯಿಸುವಂತೆ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಸುಶಾಂತ್ ಅವರ ಕುಟುಂಬ ಸದಸ್ಯರು ಸಹ ಕೇವಿಯಟ್ ಸಲ್ಲಿಸಿದ್ದರು. ಈಗ ಬಿಹಾರ ಸರ್ಕಾರ ಕೂಡ ಯಾವುದೇ ತೀರ್ಪು ತೆಗೆದುಕೊಳ್ಳುವ ಮೊದಲು ತನ್ನ ನಿರ್ಧಾರವನ್ನು ಕೇಳಬೇಕು ಎಂದು ಕೇವಿಯೆಟ್ ನಲ್ಲಿ ಹೇಳಿದೆ.
ಸುಶಾಂತ್ ಅವರ ತಂದೆ ಕೆ.ಕೆ.ಸಿಂಗ್ ಅವರು ವಕೀಲ ನಿತಿನ್ ಸಲೂಜಾ ಮೂಲಕ ನ್ಯಾಯಾಲಯದಲ್ಲಿ ಸಲ್ಲಿಸಿರುವ ಕೇವಿಯಟ್‌ನಲ್ಲಿ – ಈ ಸಂದರ್ಭದಲ್ಲಿ ಅವರಿಗೆ ನೋಟಿಸ್ ನೀಡದೆ ಏನೂ ಮಾಡಲಾಗದು ಎಂದಿದ್ದಾರೆ. ಪಾಟ್ನಾದಲ್ಲಿ ದಾಖಲಾದ ಎಫ್‌ಐಆರ್ ವರ್ಗಾವಣೆಗಾಗಿ ಬಾಲಿವುಡ್ ನಟಿ ರಿಯಾ ಚಕ್ರವತಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಮುಂಬೈ ಪೊಲೀಸರಲ್ಲಿ ಯಾರಾದರೂ ಅವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಅನುಮಾನ ಕಾಡುತ್ತಿದೆ ಎಂದು ಸುಶಾಂತ್ ಅವರ ಕುಟುಂಬ ವಕೀಲ, ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ
ತನ್ನ ಅರ್ಜಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವವರೆಗೂ ಬಿಹಾರ ಪೊಲೀಸ್ ತನಿಖೆಯನ್ನು ನಿಲ್ಲಿಸಬೇಕು ಎಂಬ ರಿಯಾ ಮನವಿಯನ್ನು ಬಿಹಾರ ಸರ್ಕಾರ ವಿರೋಧಿಸಿದೆ. ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ಉನ್ನತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಗಮನದಲ್ಲಿಟ್ಟುಕೊಂಡು ನಟ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಗುರುವಾರ ಈ ಪ್ರಕರಣದಲ್ಲಿ ಯಾವುದೇ ಆದೇಶ ಹೊರಡಿಸುವ ಮೊದಲು ನ್ಯಾಯಾಲಯವು ತಮ್ಮ ವಾದವನ್ನ ಮೊದಲು ಕೇಳಬೇಕು ಎಂದು ಮನವಿ ಮಾಡಿದ್ದಾರೆ ಎಂದು ವಕೀಲ ಕೇಶವ್ ಮೋಹನ್ ಹೇಳಿದ್ದಾರೆ.