Super Machi Trailer : ಸೂಪರಾಗಿ ನಿಮ್ಮನ್ನು ರಂಜಿಸಲಿದೆ, ‘ಸೂಪರ್ ಮಚ್ಚಿ’

Published on

847 Views

Super Machi Trailer : ಸೂಪರಾಗಿ ನಿಮ್ಮನ್ನು ರಂಜಿಸಲಿದೆ, ‘ಸೂಪರ್ ಮಚ್ಚಿ’

ಕನ್ನಡದ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿರುವ ಸೂಪರ್ ಮಚ್ಚಿ, ತೆಲುಗಿನಲ್ಲಿ ಇಂದು ತೆರೆಕಾಣುತ್ತಿದೆ.
100, ಲವ್ ಯೂ ರಚ್ಚು ನಂತರ, ತೆಲುಗಿನ ಈ ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿರುವ ರಚ್ಚು ಖ್ಯಾತಿಯ ರಚಿತಾ ರಾಮ್ ಗೆ ನಟನೆಯ ಈ ಚಿತ್ರ ಈಗಾಗಲೇ ಎಲ್ಲೆಲ್ಲೂ ಸದ್ದು ಮಾಡುತ್ತಿದೆ.

ಕ್ರಿಯೇಟಿವ್ ತಾರಾಗಣ

ಕಲ್ಯಾಣ್ ದೇವ್ ನಾಯಕ ನಟನೆಯ ಈ ಚಿತ್ರ ರಿಯಾ ಚಕ್ರವರ್ತಿ, ರಾಜೇಂದ್ರ ಪ್ರಸಾದ್ ಅವರಂತಹ ಅದ್ಭುತ ನಟರನ್ನು ಹೊಂದಿದೆ.

ಟ್ರೈಲರ್ ನಲ್ಲೇ ಸದ್ದು ಮಾಡಿರುವ ಸೂಪರ್ ಮಚ್ಚಿ

ಈ ಚಿತ್ರದ ಟೈಟಲ್ಲೇ ಬಹಳ ವಿಶೇಷ. ಸಸ್ಪೆನ್ಸ್, ಥ್ರಿಲ್ಲರ್, ರೊಮ್ಯಾಂಟಿಕ್ ಹಾಗೂ ಹೆಚ್ಚಾಗಿ ಎಮೋಷನಲ್ ಆಗಿರುವ ಈ ಚಿತ್ರ, ಒಬ್ಬ ಹುಡುಗಿಯ ಹಾಗೂ ಮಧ್ಯಮ ವರ್ಗದ ಸಾಮಾನ್ಯ ಯುವಕನಾಗಿರುವ ನಾಯಕನ ನಡುವೆ ನಡೆಯುವ ಪ್ರೇಮಕಾವ್ಯ ಹಾಗೂ ದ್ವಂದ್ವವನ್ನು ಒಳಗೊಂಡಿದೆ.

Super Machi Trailer

ಇನ್ನು ಚಿತ್ರದಲ್ಲಿ ಬಹುಪಾಲು ರಚಿತಾ ಹಾಗೂ ನಾಯನಕಟನ್ನೇ ಫೋಕಸ್ ಮಾಡಲಾಗಿದ್ದು, ಎರಡು ಪಾತ್ರಗಳ ಸುತ್ತಲಿನ ಕಥೆಯನ್ನು ಅರ್ಥಮಾಡಿಕೊಳ್ಳುವುದು ಪ್ರೇಕ್ಷಕನ ಕೆಲಸ. ಹಾಸ್ಯ ಪಾತ್ರ, ಸೂಪರ್ ಹಿಟ್ ಸ್ಥಳಗಳ ಬಳಕೆ, ಉತ್ತಮ ಛಾಯಾಗ್ರಹಣ, ನಯವಾದ ಸಂಗೀತ ಈ ಚಿತ್ರದ ಹೈಲೈಟ್ ಆಗಲಿದೆ.

ಹಿನ್ನೆಲೆಯಲ್ಲಿ ಸೂಪರ್ ‍ಚಿತ್ರತಂಡ

ಚಿತ್ರಕ್ಕೆ ಪುಲಿ ವಾಸು ಆಕ್ಷನ್ ಕಟ್ ಹೇಳಿದ್ದು, ಶ್ಯಾಮ್ ಕೆ ನಾಯ್ಡು ಛಾಯಾಗ್ರಹಣವಿದೆ ಹಾಗೂ ಪೂರ್ಣ ಕಾಂಡ್ರು ಅವರ ಛಾಯಾಗ್ರಹಣ ನಿರ್ದೇಶನವಿದೆ. ಸಂಕಲನವನ್ನು ಮಾರ್ತಾಂಡ್ ಕೆ ಹಾಗೂ ವೆಂಕಟೇಶ್ ಅವರು ನಿರ್ವಹಿಸಿದ್ದರೆ, ಚಿತ್ರಕ್ಕೆ ಸೂಕ್ತವಾಗುವ ಅದ್ಭುತ ಸಂಗೀತ ನಿರ್ದೇಶನವನ್ನು ಎಸ್.ತಮನ್ ಮಾಡಿದ್ದಾರೆ.

ನಿರೀಕ್ಷೆಗಳ ಅಲೆಯನ್ನೇ ಎಬ್ಬಿಸಿದೆ ವಿಕ್ರಾಂತ್ ರೋಣಾ

ಚಿತ್ರಕ್ಕೆ ಸ್ಟಾರ್ ಬಲ

ಈ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರತಂಡಕ್ಕೆ ನಿರೀಕ್ಷೆ ಹಾಗೂ ಸ್ಟಾರ್ ಮೌಲ್ಯ ತಂದುಕೊಡಲಿದ್ದಾರೆ, ಖ್ಯಾತನಟ ಪೊಸನಿ ಕೃಷ್ಣ ಮುರಳಿ. ಇವರಲ್ಲದೆ ವಿ.ಕೆ.ನರೇಶ್, ಪ್ರಗತಿ ಮುಂತಾದವರು ಪೋಷಕ ಪಾತ್ರ ನಿರ್ವಹಿಸಿದ್ದಾರೆ.
super machi movie
ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿ ಅಂತಿಮ ಹಂತ ತಲುಪಿದ್ದು, ಚಿತ್ರ ಇಂದು ಬಿಡುಗಡೆಗೊಳ್ಳುತ್ತಿದೆ.

ಚಿತ್ರವನ್ನು ವೀಕ್ಷಿಸಿ. ಚಲನಚಿತ್ರಗಳನ್ನು ಪ್ರೋತ್ಸಾಹಿಸಿ.. ಕಲಾವಿದರನ್ನು ಬೆಳೆಸಿ..

Copyright ©2026 . All Rights Reserved. privacy | terms Whatsapp: 9538193653 Email: hello@flixoye.com