ಸುಂದರ್ ಗೌಡ – ಲಕ್ಷ್ಮೀ ನಾಯ್ಕ್ ಜೋಡಿ ವಿಜಿ ಮನೆಯಲ್ಲಿ
ಸುಂದರ್ ಗೌಡ – ಲಕ್ಷ್ಮೀ ನಾಯ್ಕ್ ಜೋಡಿ ವಿಜಿ ಮನೆಯಲ್ಲಿ
ನಿನ್ನೇ ಮೈಸೂರಿನಲ್ಲಿ ಗೌಪ್ಯವಾಗಿ ಮದುವೆಯಾಗಿ ಎಲ್ಲರಿಗೂ ಸರ್ ಪ್ರೈಸ್ ಕೊಟ್ಟ ನವಜೋಡಿ ಸುಂದರ್ ಗೌಡ – ಲಕ್ಷ್ಮೀ ನಾಯ್ಕ್ ಇಬ್ಬರು ವಿಜಿ ಮನೆಯಲ್ಲಿ ತಂಗಿದ್ದರು. ಮಾಯಗೊಂಡ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ಲಕ್ಷ್ಮೀ ಎಸ್.ನಾಯ್ಕ್ ಮತ್ತು ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಯಾರಿಗೂ ತಿಳಿಸದೆ ಓಡಿಹೋಗಿ ಮದುವೆಯಾಗಿದ್ದಾರೆ. ಈಗಾಗಲೇ ಶಾಸಕನ ಪುತ್ರಿಗೆ ಮನೆಯಲ್ಲಿ ಮದುವೆ ಮಾತುಕತೆ ನಡೆದಿತ್ತು. ಮನೆಯಲ್ಲಿ ತನ್ನ ಪ್ರೀತಿಯ ವಿಷಯ ವನ್ನು ಪ್ರಸ್ತಾಪ ಮಾಡದ ಲಕ್ಷ್ಮೀ ನಿನ್ನೆ ತಾನು ಪ್ರೀತಿಸಿದ ಹುಡುಗನ ಜೊತೆ ಮೈಸೂರಿನಲ್ಲಿ ಮದುವೆ ಮಾಡಿಕೊಂಡು ನಂತರ ‘ ನಾನು ಸುಂದರ್ ಗೌಡ ಇಬ್ರು ಇಷ್ಟಪಟ್ಟು ಇಚ್ಚೆಯಿಂದ ಮದ್ವೆಯಾಗಿದ್ದೇವೆ. ಇಬ್ಬರು ಮನಸಾರೆ ಪ್ರೀತಿಸಿದ್ವಿ, ನನಗೆ ಯಾರು ಪೋರ್ಸ್ ಮಾಡಿಲ್ಲ. ನಾನು ಮೈನರ್ ಅಲ್ಲ ಮೇಜರ್ ,ನನಗೆ ಯೋಚನೆ ಮಾಡುವಷ್ಟು ಸ್ವಂತ ಬುದ್ಧಿ ಇದೆ. ಐಯಾಮ್ ಹ್ಯಾಪಿ ಟು ಲಿವ್ ವಿಥ್ ಹಿಮ್ ‘ ಇದನ್ನು ವಿಡಿಯೋ ಮಾಡಿ ಮಾಧ್ಯಮ ಗಳಿಗೆ ಮತ್ತು ಪೋಷಕರಿಗೆ ಕಳುಹಿಸಿದ್ದಾರೆ. ನಿನ್ನೆ ರಾತ್ರಿ ದುನಿಯಾ ವಿಜಿಯ ಮನೆಗೆ ಬಂದ ಜೋಡಿಯನ್ನು ದುನಿಯಾ ವಿಜಿ ಇಂದು ಬೆಳಿಗ್ಗೆ ಪೋಲೀಸ್ ಸ್ಟೇಷನ್ ಗೆ ಕರೆದೊಯ್ದರು. ಗೆಳೆಯ ಸುಂದರ್ ಗೌಡ ಪ್ರೀತಿಸಿ ಮದುವೆಯಾಗಿದ್ದಾರೆ. ಅವರನ್ನು ತಡೆಯುವುದು ತಪ್ಪು ಎಂದು ಹೇಳಿದ್ದಾರೆ. ‘ ನಾನು ಕಾಣೆಯಾಗಿಲ್ಲ. ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯಾಗಿದ್ದೇನೆ’ ಎಂದು ಲಕ್ಷ್ಮೀ ನಾಯ್ಕ್ ಯಲಯಂಕ ಪೋಲಿಸ್ ರಿಗೆ ಹೇಳಿಕೆ ನೀಡಿದ್ದಾರೆ.