‘ಪ್ರೀಮಿಯರ್ ‌ಪದ್ಮಿನಿ’ ವೀಕ್ಷಿದ ಸುದೀಪ್

Published on

432 Views

‘ಪ್ರೀಮಿಯರ್ ಪದ್ಮಿನಿ’ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾ ಕೊನೆಯವರೆಗೂ ಸಾಕಷ್ಟು ಕುತೂಹಲ ವನ್ನು ಕಾಯ್ದಿರಿಸಿಕೊಳ್ಳುತ್ತದೆ. ಸರಳವಾಗಿ ಮೂಡಿ ಬಂದಂತಹ ಚಿತ್ರ ‘ಪ್ರೀಮಿಯರ್ ಪದ್ಮಿನಿ’.

‘8ಎಂಎಂ’ ಸಿನಿಮಾದ ಬಳಿಕ ನಟ ಜಗ್ಗೇಶ್ ನಟಿಸಿರುವ ಚಿತ್ರ ‘ಪ್ರೀಮಿಯರ್ ಪದ್ಮಿನಿ’ ಈ ಚಿತ್ರದಲ್ಲಿ ಜಗ್ಗೇಶ್ ರವರನ್ನು ಹೊಸ ರೀತಿಯಲ್ಲಿ ನೋಡಬಹುದು. ಭಾವನಾತ್ಮಕ ಮನರಂಜನೆಯ ಮೂಲಕ ಪ್ರೇಕ್ಷಕರ ‌ಮನಸ್ಸನ್ನು ಮುಟ್ಟುವ ಚಿತ್ರ ‘ಪ್ರೀಮಿಯರ್ ಪದ್ಮಿನಿ’.
‘ಜಗ್ಗೇಶ್ ಸರ್ ಬಗ್ಗೆ ಸಂತೋಷವಾಯಿತು. ನಮ್ಮೆಲ್ಲಾ ಹೃದಯಕ್ಕೆ ಹತ್ತಿರವಾದ ಪಾತ್ರ ಅವರದು. ಎಂಥಾ ಕಠಿಣವಾದ ಪಾತ್ರವನ್ನು ನಿರ್ವಹಿಸಬಲ್ಲ ಅದ್ಭುತ ನಟ. ಆಗ ಕಾಮಿಡಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈಗ ಇಂಥದೊಂದು ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಅವರೊಳಗಿರುವ ಅರ್ಥಪೂರ್ಣ ಪಾತ್ರಗಳಿಗಾಗಿ ಇರುವ ಹಸಿವನ್ನು ಇದು ತೋರಿಸುತ್ತದೆ. ನಿಮ್ಮ ಮೌನ ಸಾವಿರ ಮಾತುಗಳನ್ನು ಹೇಳುತ್ತದೆ.

ಸಿನಿಮಾ ಕೊನೆಗೊಳ್ಳುವ ರೀತಿಯೂ ಇಷ್ಟವಾಯಿತು. ಚಿತ್ರದಲ್ಲಿ ನಾಟಕೀಯತೆ ಇಲ್ಲ. ನಾವು ಎಷ್ಟೇ ತಡೆಯಲು ಯತ್ನಿಸಿದರೂ ಕೊನೆಯ ಮಾತು‌ ಕೇಳುತ್ತಿದ್ದಂತೆ ಕಣ್ಣ ಹನಿಯೊಂದು ಕೆನ್ನೆಗೆ ಇಳಿಯಿತು. ಪ್ರೀಮಿಯರ್ ಪದ್ಮಿನಿ ಯಲ್ಲಿ ಭಾವನೆಗಳನ್ನು ಚೆನ್ನಾಗಿ ಕಟ್ಟಿಕೊಂಡಿದ್ದಾರೆ. ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ. ಚಿತ್ರ ನೋಡುತ್ತಿದ್ದಂತೆ ನಿರ್ದೇಶಕರ ಕ್ರಿಯೇಟಿವಿಟಿ ಎದ್ದು ಕಾಣುತ್ತದೆ. ಅರ್ಜುನ್ ಜನ್ಯ ಸಂಗೀತ ಸೂಪರ್ ಎಂದು‌ ಸುದೀಪ್ ಟ್ವೀಟ್ ಮಾಡಿದ್ದಾರೆ. ಚಿತ್ರತಂಡಕ್ಕೆ ವಂದನೆಯನ್ನು ಸಲ್ಲಿಸಿದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com