ಅನೂಪ್ ಭಂಡಾರಿ‌ ನಿರ್ದೇಶನದ ‘ಅಶ್ವತ್ಥಾಮ’ ದಲ್ಲಿ ಸುದೀಪ್..!!

Published on

455 Views

ಸುದೀಪ್ ಅಭಿನಯದ ‘ಫ್ಯಾಂಟಮ್’ ಚಿತ್ರದ ನಿರ್ದೇಶಕ ‌ಅನೂಪ್ ಭಂಡಾರಿ ಈಗಾಗಲೇ ಚಿತ್ರಕಥೆ ಸಿದ್ಧಪಡಿಸಿ, ಆ ಚಿತ್ರದ ಕೆಲವೊಂದು‌ ಕೆಲಸಗಳ ತಯಾರಿಯಲ್ಲಿರುವ ‘ಅಶ್ವತ್ಥಾಮ’ ಚಿತ್ರದ ನಾಯಕ ಯಾರಾಗಲಿದ್ದಾರೆ‌ಂಬ ಎನ್ನುವ ಕೂತುಹಲ ಎಲ್ಲರಲ್ಲೂ‌ ಇತ್ತು‌. ಇದೀಗ ಬಂದ ಮಾಹಿತಿಯೆಂದರೆ ಈ ಚಿತ್ರದಲ್ಲೂ‌ ಸುದೀಪ್ ‌ಅವರೇ ಕಾಣಿಸಿಕೊಳ್ಳಲಿದ್ದಾರೆ.


“ಇದರ ಬಗ್ಗೆ ಈಗಾಗಲೇ ಸುದೀಪ್ ರವರ ಜೊತೆ‌ ಚರ್ಚಿಸಿದ್ದೇನೆ. ಕಥಾಹಂದರದ ಬಗ್ಗೆ ಉತ್ಸುಕನಾಗಿದ್ದೇನೆ” ಎಂದು‌ ಅನೂಪ್ ಭಂಡಾರಿ ತಿಳಿಸಿದ್ದಾರೆ. ‘ಪ್ಯಾಂಟಮ್’ ಚಿತ್ರದ‌ ಚಿತ್ರೀಕರಣ ಕಡೆ ಹಂತದಲ್ಲಿದ್ದು, ಇದರ ನಂತರ ‘ಅಶ್ವತ್ಥಾಮ’ ನ ಕೈಗೆತ್ತಿಕೊಳ್ಳಲಿದ್ದಾರೆ ಅನೂಪ್ ಎಂಬುದು‌ ಖಚಿತವಾಗಿದೆ. ಸದ್ಯದಲ್ಲಿ ಸುದೀಪ್ ರವರು ಬಿಗ್ ಬಾಸ್ ಸೀಸನ್ 8 ರಲ್ಲಿ ಬಿಜಿಯಾಗಲಿದ್ದಾರೆ. ‘ಕೋಟಿಗೊಬ್ಬ 3’ ಬಿಡುಗಡೆಗೆ ಸಜ್ಜಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com