ಇದೇ ತಿಂಗಳಲ್ಲಿ ತೆರೆಗೆ ಬರಲಿದೆ “ಸ್ಟ್ರೈಕರ್”

Published on

323 Views

ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಹಾಗೂ ಚೂರಿಕಟ್ಟೆ ಚಿತ್ರಗಳ ನಂತರ ಪ್ರವೀಣ್ ನಾಯಕನಾಗಿ ಕಾಣಿಸಿಕೊಂಡಿರುವ ಸ್ಟ್ರೈಕರ್ ಇದೇ ತಿಂಗಳಲ್ಲಿ ತೆರೆಗೆ ಬರಲಿದೆ. ಪವನ್ ತ್ರಿವಿಕ್ರಮ್ ಎಂಬುವವರು ನಿರ್ದೇಶನ ಮಾಡಿರುವ ಈ ಚಿತ್ರವನ್ನು ಗರುಡಾದ್ರಿ ಆರ್ಟ್ಸ್ ಬ್ಯಾನರ್ ನಡಿಯಲ್ಲಿ ಜಿ.ಶಂಕ್ರಪ್ಪ ಸುರೇಶ್ ಬಾಬು ಹಾಗೂ ರಮೇಶ್ ಬಾಬು ಎಂಬುವವರು ನಿರ್ಮಾಣ ಮಾಡಿದ್ದಾರೆ.

ಚಿತ್ರಕ್ಕೆ ಭರತ್.ಬಿ.ಜೆ ಅವರ ಸಂಗೀತ ರಾಕೇಶ್ ಎರುಕುಲ್ಲ ಅವರ ಛಾಯಗ್ರಾಹಣ ವೆಂಕಿ(ಯುಡಿಡಿ) ಅವರ ಸಂಕಲನವಿದೆ. ಭಜರಂಗಿ ಲೋಕಿ, ಧರ್ಮಣ್ಣ ಸೇರಿದಂತೆ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿ ನಟಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com