ಡಿಸೆಂಬರ್ 16 ರಿಂದ ಕೆ.ಜಿ.ಎಫ್ ಟಿಕೆಟ್ ಬುಕ್ಕಿಂಗ್ ಆರಂಭ

Published on

301 Views

ಟ್ರೈಲರ್ ಮೂಲಕ ಸಂಚಲನ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್
ಅಭಿನಯದ ಕೆ‌.ಜಿ.ಎಫ್ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದು ಈ ತಿಂಗಳ 21ಕ್ಕೆ ತೆರೆಗೆ ಬರುತ್ತಿದೆ. ಐದು ಭಾಷೆಯಲ್ಲಿ ತೆರೆಕಾಣಲಿರುವ ಈ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಡಿಸೆಂಬರ್ 16ರಿಂದ ಪ್ರಾರಂಭವಾಗಲಿದೆ.

ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಈ ಚಿತ್ರದ ಪ್ರೀಮಿಯರ್ ಷೋ ಯುಎಸ್‌ಎ ಮತ್ತು ಕೆನಡಾದಲ್ಲಿ ಬಿಡುಗಡೆಯ ಹಿಂದಿನ
ದಿನವೇ ನಡೆಯಲಿದೆ. ಕೆಜಿಎಫ್ ಕನ್ನಡ, ಹಿಂದಿ. ತೆಲುಗು, ಹಾಗೂ ತಮಿಳು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com