ಪೈಲ್ವಾನ್ ನಲ್ಲಿ ಸ್ಟಾರ್ ನಟರು??

Published on

611 Views

ಪೈಲ್ವಾನ್ ನಲ್ಲಿ ಸ್ಟಾರ್ ನಟರು??

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ. ಪೈಲ್ವಾನ್ ಸಿನಿಮಾ ಮೂಲಕ ಕಿಚ್ಚ ಮತ್ತು ಗಜಕೇಸರಿ ಕೃಷ್ಣ ಒಂದಾಗುತ್ತಿದ್ದಾರೆ. ಹೆಬ್ಬುಲಿ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದ್ದು ಆರ್ ಆರ್ ಆರ್ ಮೂಷನ್ಸ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಚೆನೈ ನಲ್ಲಿ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಾಸ್ ಆಗುವ ಮುನ್ನ ಕಿಚ್ಚ ಸುದೀಪ್ ಪೈಲ್ವಾನ್ ಸಿಗ್ನೇಚರ್ ಪೋಸ್ ನೊಂದಿಗೆ ಎರಡು ಫೋಟೋವನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ , ರವಿಚಂದ್ರನ್ ಹಾಗೂ ವಜ್ರಮುನಿ ಕಾಣಿಸಿಕೊಂಡಿದ್ದಾರೆ. ಹಾಗಂತ ಪೈಲ್ವಾನ್ ಸಿನಿಮಾದಲ್ಲಿ ಇವೆರೆಲ್ಲರೂ ಅಭಿನಯ ಮಾಡುತ್ತಿದ್ದಾರಾ? ಪಕ್ಕಾ ಇಲ್ಲ.

ಆ ಫೋಟೋ ಹಿಂಬದಿಯಲ್ಲಿ ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ , ರವಿಚಂದ್ರನ್ ಹಾಗೂ ವಜ್ರಮುನಿ ಸೇರಿದಂತೆ ಇನ್ನೂ ಮಹಾನಟರ ಚಿತ್ರಗಳಿವೆ. ಸದ್ಯ ಮೊದಲ ಶೆಡ್ಯೂಲ್ ಮುಗಿಸಿ ಬೆಂಗಳೂರಿನತ್ತ ಬರುತ್ತಿರುವ ಚಿತ್ರತಂಡ ಸಿನಿಮಾದ ಬಗ್ಗೆ ಆಗಾಗ ಮಾಹಿತಿ ಕೊಡುತ್ತಿರುತ್ತಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com