ಶಂಕರನಾಗ್ ನಾಟಕೋತ್ಸವಕ್ಕೆ ವೇದಿಕೆ ಸಜ್ಜು..
ಎಲ್ಲವೂ ಶುರುವಾಯಿತು ಎಲ್ಲವೂ…..
ಸಿಟಿ ಮಾರ್ಕೆಟ್ಟು, ಮೆಜೆಸ್ಟಿಕ್ಕು, ಕಮರ್ಷಿಯಲ್ ಸ್ಟ್ರೀಟು, ಎಂ.ಜಿ.ರೋಡು, ಗಾಂಧಿಬಜಾರು, ಎಲ್ಲ ಕಡೆ ಜನ ಸಹಜ ಸ್ಥಿತಿಗೆ ಮರಳ್ತಾ ಇದಾರೆ….
ಚುನಾವಣೆ ಬಂತು ರಾಜಕೀಯ ಸಭೆಗಳೂ ನಡೆಯಿತು, ಸಾವಿರಾರು ಜನ ಸೇರಿದ್ರು, ಹಲಗೆ ಹೊಡದ್ರು, ಹಬ್ಬ ಹರಿದಿನಗಳು ನಡದೋಯ್ತು, ಬೇಸಿಗೆ ಕಾಲದಲ್ಲಿ ಒಣಗೋಕೆ ಶುರುವಾದ ಸೆಟ್ಟು, ಪ್ರಾಪರ್ಟಿಗಳು, ಮಳೆಗಾಲಕ್ಕೆ ನೆಂದು ಚಳಿಗಾಲದಲ್ಲಿ ಬೂಸ್ಟ್ ಹಿಡಿಯೋ ಮಟ್ಟಕ್ಕೆ ಬಂದು ನಿಂತಿದೆ. ಬಣ್ಣವನ್ನೇ ಬದುಕಾಗಿಸಿಕೊಂಡ ನಮಗೆ ಬಣ್ಣ ಹಾಕದೆ ಇರೋ ಸಂಕಟ ಕಲಾವಿದನಿಗೆ ಮಾತ್ರ ಗೊತ್ತು.
ಇದೆಲ್ಲಾ ಬೇಕಾ ಅಂತ ಹಿರಿಯರು ಕಿವಿ ಹಿಂಡಬಹುದು. ಇದೊಂದು ಸಲ ಕ್ಷಮಿಸಿ ಜೊತೆಗಿರಿ…..
*ಶಂಕರ್‌ನಾಗ್ ನಾಟಕೋತ್ಸವ* ೨೦೨೦ ನವೆಂಬರ್ ೨೩, ೨೪, ೨೫, ೨೬, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಂಸ ಬಯಲು ರಂಗಮಂದಿರದಲ್ಲಿ ನಡೀತಿದೆ.
ಮತ್ತೆ ನಿಮ್ಮ ಚಪ್ಪಾಳೆಯ ಸದ್ದಿನಿಂದ ಬದುಕೋ ಭರವಸೆಯನ್ನು ಕಂಡ್ಕೋತೀವಿ,
ದಯಮಾಡಿ ಜೊತೆಗಿರಿ…
“ಪ್ರತೀ ವರ್ಷದ ಪರಮ ಗುರಿ” ಎಂಬ ಅಡಿಬರಹ ಹೊತ್ತು ಈ ವರ್ಷದ *ಶಂಕರ್ ನಾಗ್ ನಾಟಕೋತ್ಸವ* ನಾಲ್ಕು ದಿನ ನಡೆಯಲಿದ್ದು, ೨೩ನೇ ತಾರೀಖು ಮಹಿಳಾ ಅತಿಥಿಗಳ ಮುಖೇನ ಉದ್ಘಾಟನೆಗೊಳ್ಳಲಿದ್ದು, “ಕಾವ್ಯ ಸಂಜೆ”, “ನಾಗರ ಕಟ್ಟೆ”, “ರಂಗ ಗೀತೆಗಳ ಗಾಯನ”, “ಸೂಫಿ ಗಾಯನ” ಮತ್ತು “ತತ್ವಪದಗಳ ಗಾಯನ”, “ವಿಚಾರ ಸಂಕೀರ್ಣ”, “ಬದುಕು ಕಲಿಸುವ ಬೇಂದ್ರೆ, ಲಂಕೇಶರ ನಾಟಕಗಳು, ಶಂಕರ್ ನಾಗ್ ಪ್ರಶಸ್ತಿ ಪ್ರದಾನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ದಿನಾ ಸಂಜೆ ೫.೩೦ ರಿಂದ ಶುರುವಾಗಿ ನಾಟಕದ ಮುಖೇನ ಮುಕ್ತಾಯಗೊಳ್ಳುತ್ತದೆ.
೨೩ ರಂದು ಉದ್ಘಾಟನೆ “ಸೂಫಿ ಗಾಯನ”,
೨೪ರಂದು ನಾಟಕ ಶ್ರದ್ಧಾ,
೨೫ ರಂದು “ಸೋಮಾಲಿಯಾ ಕಡಲ್ಗಳ್ಳರು”,
೨೬ರಂದು “ಬಿದ್ದೂರಿನ ಬಿಗ್ ಬೆನ್” ನಾಟಕ ಮತ್ತು ಸಮಾರೋಪ ಸಮಾರಂಭ,
ಹೀಗೆ ನಾಲ್ಕು ದಿನಗಳ ಉತ್ಸವದ ವರದಿಯನ್ನು ತಾವು ಪತ್ರಿಕೆಗಳ ಮುಖೇನ ನೀಡಿದ್ದಲ್ಲಿ ಸಹಕಾರಿಯಾಗುತ್ತದೆ……..
ಇಂತಿ ನಿಮ್ಮ
ಸಾತ್ವಿಕ ರಂಗಪಯಣ
🙏❤️🙏❤️🙏❤️