ಮಂಜು ಮಾಂಡವ್ಯ ಹಾಗೂ ಚಿಕ್ಕಣ್ಣ ಕಾಂಬಿನೇಷನ್ ನ “ಶ್ರೀ ಭರತ ಬಾಹುಬಲಿ” ಹಾಡುಗಳು ಮತ್ತು ಟ್ರೈಲರ್ ಇದೇ ತಿಂಗಳಲ್ಲಿ

Published on

437 Views

ರಾಜಾಹುಲಿ ಮಾಸ್ಟರ್ ಪೀಸ್ ಚಿತ್ರಗಳ ಖ್ಯಾತಿಯ ಸಂಭಾಷಣೆಕಾರ ನಟ ಹಾಗೂ ನಿರ್ದೇಶಕ ಮಂಜು ಮಾಂಡವ್ಯ ಅವರು ಮೊದಲಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿ ನಿರ್ದೇಶನ ಮಾಡುತ್ತಿರುವ “ಶ್ರೀ ಭರತ ಬಾಹುಬಲಿ” ಬಹುತೇಕ ಚಿತ್ರೀಕರಣ ಹಾಗೂ ಚಿತ್ರೀಕರಣೇತರ ಕೆಲಸಗಳನ್ನು ಮುಗಿಸಿ ಬಿಡುಗಡೆಯ ಹೊಸ್ತಿಲಿಗೆ ಬಂದಿದೆ.


ಈ ಚಿತ್ರದ ಟೀಸರ್ ಹಾಗೂ ಶೀರ್ಷಿಕೆಯ ಮೂಲಕ ಕುತೂಹಲ ಹುಟ್ಟಿಸಿರುವ ಈ ಚಿತ್ರದಲ್ಲಿ ಮಂಜು ಮಾಂಡವ್ಯ ಅವರ ಜೊತೆ ಚಿಕ್ಕಣ್ಣ ಅವರು ನಟಿಸಿದ್ದು ಸಂಪೂರ್ಣ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದ್ದಾರೆ. ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿವೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com