ಅಮರಜ್ಯೋತಿ ಪಿಕ್ಚರ್ಸ್ ಸಂಸ್ಥೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ “ಶ್ರೀ ಅಲ್ಲಮ ಪ್ರಭು”
ಅಮರಜ್ಯೋತಿ ಪಿಕ್ಚರ್ಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ 12ನೇ ಶತಮಾನದ ಇತಿಹಾಸವುಳ್ಳ ವ್ಯೋಮಕಾಯ ಸಿದ್ಧ “ಶ್ರೀ ಅಲ್ಲಮ ಪ್ರಭು” ಕನ್ನಡ ಚಲನಚಿತ್ರ ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿರುವ ಶ್ರೀ ಅಲ್ಲಮಪ್ರಭು ಚಿತ್ರತಂಡ ಸೋಮವಾರ 4ನೇ ತಾರೀಕಿನ ದಿನ ಬೆಂಗಳೂರಿನಲ್ಲಿ ಶಿವಪಾರ್ವತಿ ಹಾಡಿನ ದ್ರಶ್ಯ ದ ಚಿತ್ರೀಕರಣ ಮುಗಿಸುವುದರೊಂದಿಗೆ ಕುಂಬಳಕಾಯಿ ಒಡೆದು ಚಿತ್ರೀಕರಣ ಮುಕ್ತಾಯ ಗೊಳಿಸಿದೆ. ಅಲ್ಲದೇ ಈ ಚಿತ್ರವು ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ, ಮರಾಠಿ, ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವುದುದಾಗಿ ಈ ಚಿತ್ರ ನಿರ್ಮಾಣಕ್ಕೆ ಸಾಕಷ್ಟು ವರ್ಷ ಅಭ್ಯಸಿಸಿ ಕಥೆ-ಸಂಭಾಷಣೆ – ನಿರ್ಮಾಣ ಮಾಡುತ್ತಿರುವುದಾಗಿ ಮಾಧವಾನಂದ ತಿಳಿಸಿದ್ದಾರೆ. ಇವರಿಗೆ ಶ್ರೀ ಮಹಾವೀರ ಪ್ರಭುರವರು ನಿರ್ಮಾಣಕ್ಕೆ ಜೊತೆಯಾಗಿದ್ದಾರೆ.
ಈ ಚಿತ್ರದಲ್ಲಿ ಅನೇಕ ಮನೋಹರವಾದ ಪ್ರಾಕೃತೀಕ ದೃಶ್ಯಗಳು ಜೊತೆಗೆ ಅದ್ಬುತವಾದ ಕೈಲಾಸ ಶಿವಪಾರ್ವತಿಯ ವಿಭಿನ್ನವಾದ ಹಾಡನ್ನು ನೋಡಬಹುದು ಡಾ. ಸಂಜಯ್ ಶಾಂತಾರಂ, ಅಂಕಿತ ಶಿವಪಾರ್ವತಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ದೃಶ್ಯ ಗಳನ್ನು ನಿರ್ದೇಶಕ ಶರಣ್ ಗದ್ವಾಲ್ ರವರು ಸೆರೆಹಿಡಿದಿದ್ದಾರೆ. ಕೊನೆಯ ದಿನದ ಶ್ರೀ ಅಲ್ಲಮಪ್ರಭು ಚಿತ್ರೀಕರಣದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಕೃಷ್ಣೆ ಗೌಡ, ಸಂಕಲನಕಾರರಾದ ಬಿ. ಎಸ್. ಕೆಂಪರಾಜು, ಸಂಗೀತ ನಿರ್ದೇಶಕ ಕುಮಾರ್ ಈಶ್ವರ್, vfx ಎಂಜಿನಿಯರ್ ನಾಗೇಶ್ ಹಾಗೂ ಸಂದೀಪ್ ಮಲಾನಿ ಚಿತ್ರತಂಡದ ಜೊತೆಗಿದ್ದರು.
ಚಿತ್ರದ ತಾರಾಬಳಗದಲ್ಲಿ ಸಚಿನ್ ಸುವರ್ಣ, ನಿನಾಸಂ ಅಶ್ವಥ್, ರಮೇಶ ಪಂಡಿತ್,ಗಣೇಶ ರಾವ್ ಕೇಸರ್ಕರ್ ,ನಾರಾಯಣ ಸ್ವಾಮಿ, ವಿಕ್ರಂ ಸೂರಿ, ರಘು ಭಟ್,ಯತೀರಾಜ್, ಶೃಂಗೇರಿ ರಾಮಣ್ಣ, ಶಿವಮೊಗ್ಗ ಭಾಸ್ಕರ್, ಕಾವೇರಿ ಶ್ರೀಧರ್, ಶಿವಕುಮಾರ್ ಆರಾಧ್ಯ, ಡಾ. ಚಿಕ್ಕಹೆಜ್ಜಾಜಿ ಮಹಾದೇವ, ಸಂದೇಶ ರಾಜ್, ಸಂದೀಪ್ ಮಲಾನಿ, ಗುಬ್ಬಿ ನಟರಾಜ್, ಶಿವಮೊಗ್ಗ ರಾಮಣ್ಣ, ಅವಿನಾಶ ಪಾಟೀಲ್,ರಮಣಾಚಾರ್ಯ,ರಾಧಾ ಕೃಷ್ಣ ರಾವ್, ರಾಜ್ ಉದಯ್, ಸಂಭ್ರಮ ಶ್ರೀ, ಅಮೃತಾ, ವರ್ಷಿಣಿ ಹಾಗೂ ಇನ್ನಿತರರು ಈ ಚಿತ್ರವನ್ನು ಪೂಜ್ಯರ ಆಶೀರ್ವಾದದೊಂದಿಗೆ ಶ್ರೀ ಮಹಾವೀರ ಪ್ರಭು ಹಾಗೂ ಮಾಧವಾನಂದ ಸೇರಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಚಿತ್ರರಂಗದಲ್ಲಿ ಹಲವು ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವಿ ಶರಣ್ ಗದ್ವಾಲ್ ರವರು ಆಕ್ಷನ್ ಕಟ್ ಹೇಳಿದ್ದಾರೆ,ಕಥೆ, ಚಿತ್ರಕಥೆ, ಪರಿಕಲ್ಪನೆ ಮಾಧವಾನಂದ ವೈ, ಛಾಯಾಗ್ರಾಹಣ – ಆರ್ ಗಿರಿ,ರವಿಶಂಕರ್ ಹಾಗೂ ಮಾಧವಾನಂದ ಸೇರಿ ಸಂಭಾಷಣೆ ಬರೆದಿದ್ದಾರೆ, ಸಂಗೀತ – ಕುಮಾರ್ ಈಶ್ವರ್,ಸಂಕಲನ – ಬಿ. ಎಸ್. ಕೆಂಪರಾಜು, ಪ್ರಸಾದನ – ರಮೇಶ ಬಾಬು, ವಸ್ತ್ರಲಂಕಾರ – ಬೆಳ್ಳಿಚುಕ್ಕಿ ವೀರೇಂದ್ರ, ಪ್ರಚಾರ ಕಲೆ – ಮಸ್ತಾನ್, ಪತ್ರಿಕಾ ಸಂಪರ್ಕ – ಎಂ. ಜಿ. ಲಿಂಗರಾಜ್, ಸ್ಥಿರ ಚಿತ್ರಣ – ಪ್ರೇಮ್ ರಾಜ್,ಈ ಚಿತ್ರಕ್ಕೆ ಶುಕ್ರ ಫಿಲಂಸ್ ಸೋಮಣ್ಣರವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.