Bagheera : ಪ್ರಶಾಂತ್ ನೀಲ್ ಕಥೆಯಲ್ಲಿ ‘ಬಘೀರ’ನಾದ ಶ್ರೀಮುರಳಿ

Published on

762 Views

Bagheera : ಶ್ರೀಮುರಳಿ ‌ಅಭಿಮಾನಿಗಳಿಗೆ ಇಂದು‌ ಡಬಲ್ ಧಮಾಕ್‌ ಎನ್ನಬಹುದು. ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದ್ದರೆ, ಅದೇ ಖುಷಿಯ ನಡುವೆ‌ ಶ್ರೀಮುರಳಿರವರ ಇನ್ನೊಂದು ಸಿನಿಮಾ ಅನೌನ್ಸ್ ಆಗಿದೆ. ‘ಕೆಜಿಎಫ್’ ಮೂಲಕ ಹವಾ ಸೃಷ್ಟಿ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ ಹಾಗೂ ಪ್ರಶಾಂತ್ ನೀಲ್ ಪ್ರಭಾಸ್ ನಟಿಸುತ್ತಿರುವ ‘ಸಲಾರ್’ ಸಿನಿಮಾವನ್ನು ಇತ್ತೀಚಿಗೆ ಅನೌನ್ಸ್ ಮಾಡಿದ್ದರು.

ಈಗ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು‌ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು, ಆ ಸಿನಿಮಾದಲ್ಲಿ ಶ್ರೀಮುರಳಿ ‌ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ‌ರಿಲೀಸ್ ಆಗಿದ್ದು, ಗಂಭೀರ ಲುಕ್ ನ ಪೋಲಿಸ್ ‌ಪಾತ್ರದಲ್ಲಿ‌ ಕಾಣಿಸಿಕೊಂಡಿದ್ದಾರೆ ‌ಶ್ರೀಮುರಳಿ. ಡಾ.ಸೂರಿ ನಿರ್ದೇಶನದಲ್ಲಿ ಬರುತ್ತಿರುವ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಕಥೆಯನ್ನು ಪ್ರಶಾಂತ್ ನೀಲ್ ಬರೆದಿದ್ದಾರೆ. ಪ್ರಶಾಂತ್ ನೀಲ್‌ ಕಥೆ ಎಂದರೆ ಸಾಮಾನ್ಯವಾಗಿ ‌ಎಲ್ಲರೂ‌ ಕುತೂಹಲ ‌ಇದ್ದೆ‌ ಇದೆ. ‘ಸಮಾಜವು ಕಾಡಾಗಿ ಬದಲಾದಾಗ ಮತ್ತು ನ್ಯಾಯಕ್ಕಾಗಿ ಕೇವಲ ಒಂದು ಪ್ರಿಡೇಟರ್ ಘರ್ಜಿಸುತ್ತದೆ’ ಎಂದು ಹೊಂಬಾಳೆ ‌ಫಿಲ್ಮ್ಸ್ ಟ್ವೀಟ್ ‌ಮಾಡಿದ್ದು, ಇದೇ‌‌ ಚಿತ್ರದ‌ ಟ್ಯಾಗ್ ಲೈನ್‌ ಕೂಡ ಆಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com