‘ದುಬಾರಿ’ಗೆ ನಾಯಕಿಯಾದ ಶ್ರೀಲೀಲಾ

Published on

806 Views

ನಂದಕಿಶೋರ್ ನಿರ್ದೇಶನದ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ‘ದುಬಾರಿ’ ಸಿನಿಮಾಕ್ಕೆ ಯಾರು ನಾಯಕಿ ಆಗಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಈಗ ಅವರ ಕುತೂಹಲಕ್ಕೆ ತೆರೆ ಬಿದ್ದಿದೆ. ಈಗಾಗಲೇ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ‌ಮನಗೆದ್ದಿರುವ ಶ್ರೀಲೀಲಾ ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ.


ಎ.ಪಿ.ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀಲೀಲಾ ‘ದುಬಾರಿ’ ಸೆಟ್ ನಲ್ಲಿ ಫೆಬ್ರವರಿ ವೇಳೆಗೆ ಸೇರಿಕೊಳ್ಳಲಿದ್ದಾರೆ. ನಂದಕಿಶೋರ್ ಮತ್ತು ಧ್ರುವ ‘ಪೊಗರು’ ನಂತರ ‘ದುಬಾರಿ’ ಯಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ. ಧ್ರುವ ಅವರ ಜೊತೆ ಈವರೆಗೂ ನಟಿಸದ ಹೊಸ ನಟಿಯ ಹುಡುಕಾಟದಲ್ಲಿದ್ದ ನಿರ್ದೇಶಕರಿಗೆ ಶ್ರೀಲೀಲಾ ಧ್ರುವ ಸರ್ಜಾಗೆ ಸರಿಯಾದ ಜೋಡಿ ಎನಿಸಿ, ಕನ್ನಡದ ನಟಿಯನ್ನೇ ಆಯ್ಕೆ ಮಾಡಿಕೊಂಡಿರಂತೆ ನಿರ್ದೇಶಕ ನಂದಕಿಶೋರ್. ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸುವ ತಯಾರಿಯಲ್ಲಿದೆ ಚಿತ್ರತಂಡ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com