ಸೌತ್ ಇಂಡಿಯಾದ ಶ್ರೇಯಾ ಘೋಷಾಲ್ ಆಲಾ ಬಿ ಬಾಲ ಕನ್ನಡಕ್ಕೆ ಎಂಟ್ರಿ..!

Published on

616 Views

ಅಂದವಾದಕ್ಕೆ ಮೆರಗು ತಂದ “ಆಲಾ ಬಿ ಬಾಲ” ಗಾಯನ
ಹೊಸಬರೇ ಕೂಡಿ ಮಾಡಿರುವ ಅಂದವಾದ ಸಿನಿಮಾದ ಹಾಡುಗಳ ಕಾರಣಕ್ಕೆ ಸದ್ದು ಸುದ್ದಿಯಾಗ್ತಿದೆ. ಅನುಶಾ ನಾಯಕಿಯಾಗಿ, ಜೈ ನಾಯಕನಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಶ್ರೇಯಾ ಘೋಷಾಲ್ ಧನಿಯನ್ನ ಹೊಲುವ, ಕೇರಳದ ಮೂಲದ ಗಾಯಕಿ ಆಲಾ ಬಿ ಬಾಲ ಅವರನ್ನ ಕನ್ನಡಕ್ಕೆ ಕರೆತಂದಿದ್ದಾರೆ. ಜಯಂತ್ ಕಾಯ್ಕಿಣಿಯವರು ಬರೆದಿರುವ ಎಂದೂ ಆಗಿಲ್ಲ.. ಹೀಗೆ… ಎಲ್ಲ ಹೇಳೋದು ಹೇಗೆ… ಎನ್ನುವ ಮೆಲೋಡಿ ಹಾಡಿಗೆ ಆಲಾ ಬಿ ಧನಿಯಾಗಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ರೆಹಮಾನ್ ಸ್ಟುಡಿಯೋದ ಖಾಯಂ ಗಾಯಕಿ ಈಕೆ.

ಚಲ ನಿರ್ದೇಶನದ ಅಂದವಾದ ಚಿತ್ರಕ್ಕೆ ಕಾಲಿವುಡ್ನ ವಿಕ್ರಮ್ ವರ್ಮನ್ ಸಂಗೀತ ಸಂಯೋಜಿಸಿದ್ದಾರೆ.
ಅಂದ್ಹಾಗೆ ಅಂದವಾದ ಚಿತ್ರದ ಟೈಟಲ್ ವಿಡಿಯೋ ಹಾಡು ಆಗ್ಲೇ ಕನ್ನಡ ಸಿನಿಪ್ರಿಯರನ್ನ ಆಕರ್ಷಿಸಿದೆ. ಜೊತೆಗೆ ಎರಡು ಲಿರಿಕಲ್ ವಿಡಿಯೋಗಳು ರಿಲೀಸ್ ಆಗಿದ್ದು, ಈ ಚಿತ್ರದ ಹಾಡುಗಳು ಇಂಟ್ರೆಸ್ಟಿಂಗ್ ಆಗಿ ಕೇಳ್ತಿವೆ. ಹೊಸಬರ ಸಿನಿಮಾ ಆದ್ರೂ ಕೆಲ ಕಾರಣಗಳಿಂದ ಈ ಸಿನಿಮಾ ಇಂಪ್ರೆಸೀವ್ ಆಗಿ ಕಾಣ್ತಿದೆ. ಒಂದೊಂದೇ ವಿಚಾರವಾಗಿ ಸುದ್ದಿಯಾಗ್ತಿರೋ ಅಂದವಾದ ಚಿತ್ರ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com