ಮಾರ್ಚ್‍ನಲ್ಲಿ ‘ಸೂರ್ಯ ಇವ ವೃಕ್ಷ ಮಿತ್ರ’ ಚಿತ್ರ ತೆರೆಗೆ
ಮಾರ್ಚ್‍ನಲ್ಲಿ ‘ಸೂರ್ಯ ಇವ ವೃಕ್ಷ ಮಿತ್ರ’ ಚಿತ್ರ ತೆರೆಗೆ
ಭೂಮಿಯ 460ಕೋಟಿ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಲಕ್ಷಣ ಸಂಕಟ ಎದುರಾಗುತ್ತಿದೆ. ಇಡೀ ಜಗತ್ತೆ ಜಾಗತೀಕ ತಾಪಮಾನ ಏರಿಕೆಯಿಂದ ತತ್ತರಿಸುತ್ತಿದೆ.
ಪೆಟ್ರೋಲ್, ಡೀಸಲ್, ಕಲ್ಲಿದ್ದಲ್ಲು ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದಾಗುವ ಅನಾಹುತವನ್ನು ತಡಿಯಬೇಕಿದರೆ ಜೈವಿಕ ಇಂಧನವನ್ನು ಬಳಸಿದರೆ ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು ಎಂದು ವಿeóÁ್ಞನಿಗಳ ನಂಬಿಕೆ.
ನಮ್ಮ ದೇಶದಲ್ಲಿ ಸುಮಾರು ಐನೂರು ವಿವಿಧ ಜಾತಿ ಜೈವಿಕ ಇಂಧನ ತೆಗೆಯುವ ಮರಗಳಿವೆ. ನಮ್ಮ ಕರ್ನಾಟಕದಲ್ಲಿ ಸುಮಾರು 150ರಿಂದ 200ಜಾತಿ ಮರಗಳಿವೆ. ಈ ಮರಗಳನ್ನ ದೇಶದಲ್ಲೆಲ್ಲಾ ಹೆಚುಹೆಚ್ಚಾಗಿ ಬಳಿಸಿದರೆ ನೆರಳಿನ ಜೊತೆ ಗಾಳಿಯಲ್ಲಿ ಆಮ್ಲಜನಕ ಹೆಚ್ಚುತ್ತದೆ. ಮಳೆ ಹೆಚ್ಚಾಗುತ್ತದೆ ಎಂಬ ಸಾರಾಂಶವಿರುವ ಈ ಕಥೆಗೆ ಮುಖ್ಯ ಪ್ರೇರಣೆ ಪ್ರಖ್ಯಾತ ಪರಿಸವಾದಿಗಳಾದ ಡಾ||ಎಲ್ಲಪ್ಪ ರೆಡ್ಡಿ ಅವರ `ಲೈ¥sóï ಬಿಯಂಡ್ ಸೈನ್ಸ್` ಪುಸ್ತಕ ಆಧಾರಿಸಿದೆ. ಬೆಂಗಳೂರು, ಶಿವಮೊಗ್ಗ ಹಾಗೂ ಹಾಸನದಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ಇದೀಗ ಚಿತ್ರಕ್ಕೆ ಸೆನ್ಸಾರ್ ಕೂಡ ಆಗಿ ಯು ಅರ್ಹತಾಪತ್ರ ಬಂದಿದ್ದು, ಮಾರ್ಚ್‍ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ತಿಳಿಸಿದ್ದಾರೆ.
ಎಸ್.ಎ¥sóï ಕಂಭೈನ್ಸ್ ಲಾಂಛನದಲ್ಲಿ ಶ್ರೀಮತಿ ¥sóÁತೀಮ ಅವರು ನಿರ್ಮಿಸಿರುವ ಈ ಚಿತ್ರವನ್ನು ಅಣ್ಣಯ್ಯ.ಪಿ ನಿರ್ದೇಶಿಸಿದ್ದಾರೆ. ಶಿವಸತ್ಯ ಅವರ ಸಂಗೀತವಿರುವ ಈ ಚಿತ್ರಕ್ಕೆ ಗೌರಿಶಂಕರ್ ಅವರ ಛಾಯಾಗ್ರಹಣವಿದೆ. ಅರುಣ್ ಪಿ ಥಾಮಸ್ ಸಂಕಲನ, ಛಾಲೆಂಜಿಂಗ್ ಸೂರಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಥೆಯನ್ನು ಡಾ||ಎಲ್ಲಪ್ಪ ರೆಡ್ಡಿ ಬರೆದಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು, ಡಾ||ನಾಗೇಶ್ ಹೆಗ್ಡೆ, ಅಣ್ಣಯ್ಯ.ಪಿ, ಜೆ.ಎಂ.ಪ್ರಹ್ಲಾದ್ ಹಾಗೂ ಎ.ಆರ್.ಸಲೀಂ ಬರೆದಿದ್ದಾರೆ.
ಸಲ್ಮಾನ್(ಹೊಸ ಪರಿಚಯ), ರಾಧಾ, ಗಿರೀಶ್, ಚಂದ್ರಕಲಾ ಮೋಹನ್, ಯತಿರಾಜ್, ರಮೇಶ್ ಪಂಡಿತ್, ಬಿ.ರಾಮಮೂರ್ತಿ, ಗಿರಿಜಾ ಲೋಕೇಶ್, ಡಾ||ಎ.ಎನ್.ಎಲ್ಲಪ್ಪ ರೆಡ್ಡಿ, ಡಾ||ನಾಗೇಶ್ ಹೆಗ್ಡೆ, ಡಾ||ಶ್ರೀಪತಿ, ಡಾ||ಬಾಲಕೃಷ್ಣೇ ಗೌಡ, ಮಾಸ್ಟರ್ ಅರ್ಮಾನ್, ಬೇಬಿ ಸಿರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.