ಮೇ 10 ರಿಂದ ಹರಿಪ್ರಿಯಾ ಮುಖ್ಯ ಭೂಮಿಕೆಯ ಸೂಜಿದಾರ ತೆರೆಗೆ

ಸಿನಿ ಸ್ನೇಹ ಟಾಕೀಸ್ ಬ್ಯಾನರ್ ಅಡಿಯಲ್ಲಿ ಅಭಿಜಿತ್ ಕೋಟೆಗಾರ್
ಹಾಗೂ ಸಚ್ಚೀಂದ್ರನಾಥ್ ನಾಯಕ್ ಅವರು ನಿರ್ಮಾಣ ಮಾಡಿರುವ
ಸೂಜಿದಾರ ಚಿತ್ರವು ಮೇ 10ರಿಂದ ರಾಜ್ಯಾದ್ಯಂತ ತೆರೆಗೆ ಬರಲಿದೆ.
ಹರಿಪ್ರಿಯಾ ಹಾಗೂ ಯಶ್ವಂತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ
‘ಸೂಜಿದಾರ’ ಚಿತ್ರವನ್ನು ರಂಗಭೂಮಿ ಹಿನ್ನಲೆಯ ಮೌನೇಶ್ ಬಡಿಗೇರ್
ಅವರು ನಿರ್ದೇಶನ ಮಾಡಿದ್ದಾರೆ. ಇದೇ ಮೊದಲಬಾರಿಗೆ ನಟಿ ಹರಿಪ್ರಿಯಾ ಅವರು ವಿಭಿನ್ನವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟ್ರೈಲರ್ ಮೂಲಕ ಕೂತುಹಲ ಹುಟ್ಟಿ ಸಿರುವ ಈ ಚಿತ್ರವು ಮೇ 10ರಿಂದ ತೆರೆಕಾಣಲಿದೆ.