ಮೇ 10 ರಂದು ಮೈಮನ ಪೋಣಿಸಲಿದೆ “ಸೂಜಿದಾರ”

Published on

742 Views

ಜನಪ್ರಿಯ ರಂಗಕರ್ಮಿ ಮೌನೇಶ್ ಬಡಿಗೇರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಚಿತ್ರ ‘ಸೂಜಿದಾರ’ ಇದೇ ಮೇ 10 ರಂದು ಬಿಡುಗಡೆಯಾಗಲಿದೆ. ಬಹುಭಾಷಾ ನಟಿ ಹರಿಪ್ರಿಯಾ ಹಾಗೂ ಯಶವಂತ್‌ ಶೆಟ್ಟಿ  ಅಭಿನಯದ ‘ಸೂಜಿದಾರ’  ಸಿನಿ ಪ್ರಿಯರ ಮೈಮನ ಪೋಣಿಸಲಿದೆ. ಸಿನಿಮಾದ ಕತೆ ಕೂಡ ನಮ್ಮೊಳಗಿನ ಭಾವನೆಗಳನ್ನು ಅಚ್ಚುಕಟ್ಟಾಗಿ ಪೋಣಿಸಲಿದೆಯಾ ಅನ್ನುವ ಪ್ರಶ್ನೆ ಪ್ರೇಕ್ಷಕನಲ್ಲಿ ಹುಟ್ಟಿಕೊಂಡಿದೆ. ಚಿತ್ರದ ಟ್ರೈಲರ್ ಕೂಡ ಈಗಾಗಲೇ ಸದ್ದು ಮಾಡಿದ್ದು ಸಿನಿಮಾ ಕುರಿತ ಕುತೂಹಲ ಮೂಡಿಸುತ್ತಿದೆ.


ಎಚ್‌.ಬಿ.ಇಂದ್ರಕುಮಾರ್‌ ಅವರ ಸಣ್ಣ ಕಥೆ ಆಧರಿಸಿದ ಈ ಕತೆಗೆ ಇನ್ನಷ್ಟು ಭಾವನೆಗಳನ್ನು, ಫೋಣಿಸಿ ‘ಸೂಜಿದಾರ’ವನ್ನು ಸೃಷ್ಟಿಸಿದ್ದಾರೆ ಮೌನೇಶ್ “ಇದು ನನ್ನ ಮೊದಲ ಸಿನಿಮಾ.  ಹರಿಪ್ರಿಯಾ ಕೂಡ ಹಿಂದೆಂದೂ ಕಾಣಿಸದ ರೀತಿ ಈ ಸಿನಿಮಾದಲ್ಲಿ ಕಾಣಿಸಿದ್ದಾರೆ ಎನ್ನುತ್ತಾರೆ ನಿರ್ದೇಶಕರು.
ಶ್ರೀಧರ ಹೆಗ್ಗೋಡು ಅವರು ಚಿತ್ರದ ಹಾಡುಗಳಿಗೆ ಸಹೋದರ ದಿಗ್ವಿಜಯ ಹೆಗ್ಗೋಡು ನೆರವಿನಲ್ಲಿ ಸಂಗೀತ ಸಂಯೋಜಿಸಿದ್ದು, ಹಾಡುಗಳು ಕೂಡ ಸಾಕಷ್ಟು‌ ಸದ್ದು ಮಾಡುತ್ತಿದೆ.
ಈ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ಯಶವಂತ್ ಶೆಟ್ಟಿ ಅಭಿನಯಿಸಿದ್ದಾರೆ. ಸುಚೇಂದ್ರ ಪ್ರಸಾದ್‌, ಅಚ್ಯುತ್ ಕುಮಾರ್, ಚೈತ್ರಾ ಕೊಟೂರು, ಬಿರಾದಾರ್‌, ಶ್ರೇಯಾ ಅಂಚನ್‌ ಅವರು ತಾರಾಗಣದಲ್ಲಿದ್ದಾರೆ. ಮೋಹನ್‌ ಅವರ ಸಂಕಲನ, ಅಶೋಕ್‌ ರಾಮನ್‌ ಅವರ ಛಾಯಾಗ್ರಹಣ, ಎಸ್‌. ಪ್ರದೀಪ್‌ ಕುಮಾರ್‌ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಇನ್ನೇನು ಬಿಡುಗಡೆಗೆ ಸಿದ್ದವಾಗಿರುವ ಸೂಜಿದಾರ ನಿಜಕ್ಕೂ ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com