ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಸೋನಾಲಿ ಬೇಂದ್ರೆ

Published on

263 Views

ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಜೊತೆ ‘ ಪ್ರೀತ್ಸೆ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ವಿಷಯವನ್ನು ಸೋನಾಲಿಯವರೇ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಬಾಲಿವುಡ್ ನಟ ಇರ್ಫಾನ್ ಖಾನ್ ನಂತ್ರ , ಸೋನಾಲಿ ಬೇಂದ್ರೆಯವರು ತನಗೆ ಕ್ಯಾನ್ಸರ್ ಇರುವ ವಿಷ್ಯವನ್ನು ತಿಳಿಸಿದ್ದಾರೆ. ಸದ್ಯ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ಸೋನಾಲಿಬೇಂದ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ಟ್ರಾಗ್ರಾಮ್ ನಲ್ಲಿ ಪೋಸ್ಟ್ ಹಾಕಿರುವ ಸೋನಾಲಿ ತಾನು‌ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕ್ಯಾನ್ಸರ್ ವಿರುದ್ಧ ಹೋರಾಡಲು ನನ್ನ ಕುಟುಂಬ ಹಾಗೂ ಸ್ನೇಹಿತರು ನನಗೆ ಬೆಂಬಲ, ಆತ್ಮ ವಿಶ್ವಾಸ ನೀಡ್ತಿದ್ದಾರೆಂದು ಹೇಳಿದ್ದಾರೆ. ಸ್ನೇಹಿತರು ಮತ್ತು ಕುಟುಂಬದವರಿಗೆ ಧನ್ಯವಾದ ತಿಳಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಸೋನಾಲಿಬೇಂದ್ರೆ ಇಂಡಿಯನ್ ಬೆಸ್ಟ್ ಡ್ರಾಮೆಬಾಜೆ ರಿಯಾಲಿಟಿ ಶೋ ನಿಂದ ಹಿಂದೆ ಸರಿದರು. ಈಗ ಸೋನಾಲಿಬೇಂದ್ರೆ ಬದಲಿಗೆ ಹುಮಾ ಕುರೇಶ್ ಜಡ್ಜ್ ಆಗಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com