ಇತ್ತೀಚೆಗೆ ಸಾಮಾಜಿಕ ಮಾಧ್ಯಮದ ಕಾರಣ ರಾತ್ರೋರಾತ್ರಿ ಸ್ಟಾರ್ಸ್ ಆದವರು.

Published on

1596 Views

ಸಿನಿಮಾದರಾಗಲಿ ಇತರೆ ಯಾರೇ ಆಗಲಿ ಸ್ಟಾರ್ಸ್ ಆಗಬೇಕೆಂದರೆ ಸಾಕಷ್ಟು ಕಷ್ಟಪಟ್ಟು ಮೇಲೆ ಬರಬೇಕು. ಆದರೆ ಅದೇನೋ ಕೆಲವರು ರಾತ್ರಿಗೆ ರಾತ್ರಿಯೇ ಸ್ಟಾರ್ಸ್ ಆದರು. ಆ ರೀತಿ ಆಗಲು ಹೆಲ್ಪ್ ಮಾಡಲು ಸದಾ ಮುಂದಿರುತ್ತದೆ ಸಾಮಾಜಿಕ ಮಾಧ್ಯಮ.. ಇಲ್ಲಿ ಒಂದು ಟಾಪಿಕ್ ಆಗಲಿ, ಒಂದು ವ್ಯಕ್ತಿ ಆಗಲಿ ಇಷ್ಟವಾಯಿತೆಂದರೆ ಸುನಾಮಿ ತರಹ ಪಬ್ಲಿಸಿಟಿ ಬಂದುಬಿಡುತ್ತದೆ… ಓವರ್‌ನೈಟ್ ಸ್ಟಾರ್ಸ್ ಮಾಡುತ್ತದೆ. ಇತ್ತೀಚೆಗೆ ಆ ರೀತಿಯಲ್ಲಿ ರಾತ್ರಿಗೆ ರಾತ್ರಿಯೇ ಸ್ಟಾರ್ಸ್ ಆದ ಕೆಲವರಿದ್ದಾರೆ… ಅವರ್ಯಾರು ಗೊತ್ತಾ…

ಡಿಂಚಕ್ ಪೂಜ

ಡಿಂಚಕ್ ಪೂಜಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿ ಬದಲಾದರು. ಡಿಂಚಕ್ ಪೂಜಾ ಸ್ವಾಗ್ ವಾಲಾ ಹೆಸರಿನಲ್ಲಿ ಡಿಂಚಕ್ ಹಾಡಿದ ಹಾಡು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ರಾತ್ರಿಗೆ ರಾತ್ರಿಯೇ ಲಕ್ಷಾಂತರ ವ್ಯುಸ್ ಬಂತು. ಅಷ್ಟೇ ಅಲ್ಲ ಅದೆಷ್ಟೋ ಮಂದಿ ಸ್ಟಾರ್ಸ್ ಪೂಜಾಳನ್ನು ಪ್ರಸಂಶಿಸಿದರು.


ಪ್ರಿಯಾ ಪ್ರಕಾಶ್ ವಾರಿಯರ್

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರಲ್ಲೂ ಹುಚ್ಚು ಹೆಚ್ಚಿಸುತ್ತಿರುವ ಹುಡುಗಿ ಹೆಸರು ಪ್ರಿಯಾ ಪ್ರಕಾಶ್ ವಾರಿಯರ್. ಕಣ್ಣಿನ ಭಾಷೆಯಲ್ಲೇ ಎಲ್ಲರ ಹೃದಯ ಗೆದ್ದ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್. ಮಲಯಾಳಂನಲ್ಲಿ ’ಒರು ಅಡಾರ್ ಲವ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ ಪ್ರಿಯಾ ಪ್ರಕಾಶ್ ವಾರಿಯರ್. ಸದ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹವಾ ಎಬ್ಬಿಸಿರುವ ಬೆಡಗಿ. ಸನ್ನಿ ಲಿಯೋನ್‌ರನ್ನು ಮೀರಿಸಿದ ಫಾಲೋವರ್ಸ್ ಬಂದಿರುವುದು ಆಕೆಗೆ ಇರುವ ಕ್ರೇಜ್ ಎಷ್ಟು ಎಂದು ಗೊತ್ತಾಗುತ್ತದೆ.


ಅರ್ಷದ್ ಖಾನ್

ಪಾಕಿಸ್ತಾನದಲ್ಲಿ ಚಾಯ್ ಮಾರಿಕೊಳ್ಳುವ ನೀಲಿಕಣ್ಣಿನ ಹುಡುಗ ಒಂದು ಕ್ಲಿಕ್ ಮೂಲಕ ಜಗತ್ತಿಗೆ ಪರಿಚಯವಾದ. ಬಳಿಕ ಆತನ ಜೀವನವೇ ಬದಲಾಯಿತು. ಕೆಲವು ಟಿವಿ ಶೋಗಳಲ್ಲಿ ಅಭಿನಯಿಸಿದ್ದಾನೆ. ಸಿನಿಮಾ ಆಫರ್‌ಗಳು ಸಹ ಬಂದಿವೆ.


ಸೈಮಾ ಹುಸ್ಸೇನ್ ಮೀರ್

ಸಿಂಬಯಾಸಿಸ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎಸ್‌ಐಡಿ) ಸಿನಿಮಾ ಪ್ರಮೋಷನ್ ಭಾಗವಾಗಿ ಹೋಗಿದ್ದ ಶಾರುಕ್ ಅಲ್ಲಿನ ವಿದ್ಯಾರ್ಥಿಗಳ ಜತೆಗೆ ಸೆಲ್ಫಿ ತೆಗೆಸಿಕೊಂಡ. ಅದನ್ನು ಆತನೇ ಫೇಸ್‍ಬುಕ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಶಾರುಕ್‌ಗಿಂತಲೂ ಹೆಚ್ಚಿಗೆ ಆ ಫೋಟೋದಲ್ಲಿರುವ ಹುಡುಗಿಗೆ ನೆಟ್ಟಿಗರು ಫಿದಾ ಆದರು. ಆಕೆಯ ಹೆಸರು ಸೈಮಾ ಹುಸ್ಸೇನ್ ಮೀರ್. ಕೇವಲ ಆ ಒಂದು ಫೋಟೋದಿಂದ ಆಕೆ ಫೇಮಸ್ ಆದಳು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com