ಸ್ಮೋಕಿಂಗ್ ಬೇಬಿ, ಹೇಗಿದ್ಲು ಹೇಗಾದಳು ಗೊತ್ತಾ? 

Published on

11782 Views

ನೀವು ಯಾವುದೇ ಥಿಯೇಟರ್‌ಗೆ ಹೋದ್ರೂ ಅಲ್ಲಿ ಮೊದಲು ನೋಡೋದು, ಧೂಮಪಾನ ಮಾಡದಿರಿ ಮಾಡಲು ಬಿಡದಿರಿ, ಅನ್ನೋ ಜಾಹೀರಾತನ್ನ. ಆ ಜಾಹೀರಾತಿನಲ್ಲಿ ಒಬ್ಬ ಸಂಸಾರಸ್ಥ ಮತ್ತು ಆತನಿಗೊಬ್ಬ ಪುಟ್ಟ ಮಗಳು ಇರೋದನ್ನ ತೋರಿಸ್ತಾರೆ. ಆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಕಿ, ಇವತ್ತು ಹೀರೋಯಿನ್‌ ಆಗ್ತಿದ್ದಾಳೆ. ಅದೂ ಕನ್ನಡ ಸಿನಿಮಾ ಮೂಲಕ ಅಂದ್ರೆ ನೀವು ನಂಬಲೇಬೇಕು.

ಬೇಬಿ ಸಿಮ್ರನ್‌ ನಾಟೆಕರ್‌ ಇನ್ಮೇಲೆ ‘ಕಾಜಲ್‌’
ಸಿಮ್ರನ್‌ ನಾಟೆಕರ್‌, ಮುಂಬೈನ ಓಬೇರಾಯ್‌ ಹೋಟೆಲ್‌ ಮ್ಯಾನೇಜರ್‌ ಮಗಳು. ಮುಂಬೈನಲ್ಲಿ ಹುಟ್ಟಿ ಬೆಳೆದಿರೋ ಈ ಚೆಲುವೆ ಈಗಷ್ಟೇ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದಾಳೆ. ಮಗುವಾಗಿದ್ದಾಗ್ಲೇ ಜಾಹೀರಾತು ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ್ದ ಸಿಮ್ರನ್‌, ಭಾರತ ಸರ್ಕಾರದ ಸ್ಮೋಕಿಂಗ್‌ ಕಿಲ್ಸ್​​ ಜಾಹೀರಾತಿನ ಮೂಲಕ ದೇಶದಾದ್ಯಂತ ಖ್ಯಾತಿ ಪಡೆದಿದ್ದಳು. ಬಾಲ್ಯದಿಂದಲೇ ಬಣ್ಣದಗೀಳು ಹಚ್ಚಿಕೊಂಡಿದ್ದ ಸಿಮ್ರನ್‌, ಶಾಲಾ ಮಟ್ಟದಿಂದಲೇ ಮಾಡೆಲಿಂಗ್‌ ಜಗತ್ತಿಗೆ ಪರಿಚಯವಾಗಿದ್ದಾಳೆ. ಇದೀಗ ಮಾಡೆಲ್‌ ಆಗಿ ಮಿಂಚ್ತಿರೋ ಈಕೆ ಕನ್ನಡದಲ್ಲಿ ಸೆಟ್ಟೇರ್ತಿರೋ ಕಾಜಲ್‌’ ಚಿತ್ರಕ್ಕೆ ಹೀರೋಯಿನ್‌ ಆಗಿ ಆಯ್ಕೆಯಾಗಿದ್ದಾರೆ.

ನಾನಿ, ಕಾಲಚಕ್ರ ಸಾರಥಿಯ ‘ಕಾಜಲ್​’  
ಕರಿಯ-2 ಹೀರೋ ಸಂತೋಷ್‌ ನಾಯಕನಟನಾಗಿ ಅಭಿನಯಿಸಲಿರೋ ಸಿನಿಮಾ. ಅನೇಕಲ್‌ ಬಾಲರಾಜ್‌ ನಿರ್ಮಾಣದಲ್ಲಿ ಮೂಡಿಬರಲಿರೋ ಈ ಚಿತ್ರವನ್ನು ನಾನಿ, ಕಾಲಚಕ್ರ ಖ್ಯಾತಿಯ ಸುಮಂತ್‌ ಕ್ರಾಂತಿ ನಿರ್ದೇಶಿಸಲಿದ್ದಾರೆ

ಕನ್ನಡ ಪಿಕ್ಚರ್‌ಗಾಗಿ 4ಬಾಲಿವುಡ್‌ ಸಿನಿಮಾ ಬಿಟ್ಟ ಸಿಮ್ರನ್‌
ಸಿಮ್ರನ್‌ ಯಂಗ್‌ ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದೇ ಬಿಟೌನ್‌ನಲ್ಲಿ, ಒಂದಷ್ಟು ಫಿಲಂ ಮೇಕರ್ಸ್‌ ಈ ಬಾಲೆಯ ಹಿಂದೆ ಬಿದ್ದಿದ್ದಾರೆ. ಸುಮಾರು ನಾಲ್ಕು ಸಿನಿಮಾಗಳು ಸಿಮ್ರನ್‌ಗಾಗಿ ಕಾಯ್ತಿವೆ. ಹೀಗಿದ್ರೂ ಕನ್ನಡದ ಕಾಜಲ್‌ ಕಥೆ ಕೇಳಿರೋ ಸಿಮ್ರನ್‌ ತಂದೆತಾಯಿ, ಕನ್ನಡ ಸಿನಿಮಾನೇ ಮೊದಲನೇ ಸಿನಿಮಾ ಆಗ್ಲಿ ಅಂತ ನಿರ್ಧಸಿದ್ದಾರೆ. ಅಂದ್ಹಾಗೆ ಇದೇ ತಿಂಗಳಾಂತ್ಯಕ್ಕೆ ಕಾಜಲ್‌ ಸೆಟ್ಟೇರಲಿದೆ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com