ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ನಿರ್ಮಾಪಕರಾದ ಉಮಾಪತಿ ಹಾಗೂ ಅವರ ಸಹೋದರ ದೀಪಕ್ ಮತ್ತು ಇನ್ನು ನಾಲ್ಕು ಜನರ ಕೊಲೆಗೆ ಸ್ಕೆಚ್ ಹಾಕಿ, ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಬಗ್ಗೆ ಮಂಜುನಾಥ್ ಹಾಗೂ ಅವರ ಸಹಚರರು ಹೊಂಚು ಹಾಕುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ತಿಳಿದ ಜಯನಗರ ಪೋಲಿಸರು ಏಳು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಲು ಸ್ಕೆಚ್ ಹಾಕುತ್ತಿದ್ದ ವಿಷಯ ತಿಳಿದ ಪೊಲೀಸರು ಕೂಡಲೇ ದಾಳಿ ಮಾಡಿದ್ದಾರೆ. ಕೊಲೆ ಮಾಡಲು ಪ್ಲಾನ್ ಮಾಡಿ ಟೆಂಪೋ ಟ್ರಾವೆಲ್ ನಲ್ಲಿ ಮಾರಕಾಸ್ತ್ರ ಹಿಡಿದು ಕಾಯುತ್ತಿದ್ದರು ಎಂದು ತಿಳಿದು ಬಂದಿದೆ. ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿ, ಸಹಚರ ಬೇಕರಿ ರಘು, ನಿರ್ಮಾಪಕ ಉಮಾಪತಿ ಹಾಗೂ ಅವರ ಸಹೋದರನ ಕೊಲೆಗೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.