“ಸ್ಕಂದ” ತುತ್ತಾ ಮತ್ತಾದ ಈ ವಾರದ ಅತಿಥಿ

Published on

392 Views

ಕಿರುತೆರೆಯಲ್ಲಿ ಎಲ್ಲರ ಮನಗೆದ್ದ ಸ್ಕಂದ ಅಶೋಕ್ ಉದಯ ವಾಹಿನಿಯಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಷೋ ತುತ್ತಾ ಮುತ್ತಾ ಈ ವಾರದ ಸಂಚಿಕೆಯಲ್ಲಿ ಬರಲಿದ್ದಾರೆ.
19ನೇ ವಯಸ್ಸಿನಲ್ಲಿ ಮಲಯಾಳಂ ಭಾಷೆಯ ಸಿನಿಮಾದಲ್ಲಿ ನಟಿಸಿದ್ದ ಸ್ಕಂದನಿಗೆ, ಅಂದಿನಿಂದಲೂ ಫೀಮೇಲ್ ಫ್ಯಾನ್ಸ್ ಜಾಸ್ತಿ.

ಚಿಕ್ಕಂದಿನಿಂದಲೇ ತುಂಟನಾದರೂ ಕ್ರೀಡೆ ಹಾಗೂ ಕಾರು ಸವಾರಿಯ ಹುಚ್ಚಿತ್ತು. ಯಾರ ಸಹಾಯವಿಲ್ಲದೆ ಕಾರು ಓಡಿಸಲು ಕಲಿತ ಸ್ಕಂದನಿಗೆ ಜೀವನದ ದಾರಿ ಕೂಡ ಒಂದು ಒಳ್ಳೆಯ ಸಂಚಾರವಾಗಿಯೇ ತಮ್ಮ ಗುರಿಯನ್ನು ಮುಟ್ಟಿಸಿದೆ ಎಂದು ಸ್ಕಂದ ಅವರ ತಾಯಿ ಈ ಸಂದರ್ಭದಲ್ಲಿ ತಿಳಿಸಿದರು.


ಬಹಳಷ್ಟು ಹೆಣ್ಣು ಮಕ್ಕಳ ಪ್ರೀತಿಯನ್ನು ಪಡೆದ ಸ್ಕಂದನಿಗೆ, ತನ್ನ ಹೆಂಡತಿಯ ಮೇಲೆ ಅಪಾರ ಪ್ರೀತಿ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಭೇಟಿಯಾದ ಇಬ್ಬರ ಲವ್‍ಸ್ಟೋರಿ ಐದು ವರ್ಷ ನಡೆದು ಇಬ್ಬರ ಮದುವೆಯತ್ತ ನಡೆದದ್ದು ಹೇಗೆ ಎಂಬುದರ ವಿಷಯವನ್ನು ಅವರ ಪತ್ನಿ ಹಂಚಿಕೊಂಡರು.

ಇನ್ನು ಹೆಚ್ಚು ವಿವರಗಳನ್ನು ನೀಡುತ್ತಾ ಸ್ಕಂದನ ಕುಟುಂಬ ಪ್ರಶ್ನೋತ್ತರ ವಿಭಾಗವನ್ನು ಮಜಾ ಕೊಡ್ಡುತ್ತ ಆಡಲಿದ್ದಾರೆ. ಇಂತಹ ಸುಂದರ ದಂಪತಿಯ ಬಗ್ಗೆ ಹೆಚ್ಚು ತಿಳಿಯಲು ಈ ವಾರದ ತುತ್ತಾ ಮುತ್ತಾ ಸಂಚಿಕೆಯನ್ನು ಇದೇ ಶನಿವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ವೀಕ್ಷಿಸಿ.

“ತುತ್ತಾ ಮುತ್ತಾ” ಇದೇ ಶನಿವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com