ನಾಯಕನಾದ‌ ಗಾಯಕ ನವೀನ್ ಸಜ್ಜು…!!

Published on

340 Views

ಗಾಯಕನಾಗಿ ಗುರುತಿಸಿಕೊಂಡಿರುವ ಬಿಗ್ ಬಾಸ್ ಸೀಸನ್ 6 ರನ್ನರ್ ಅಪ್ ನವೀನ್ ಸಜ್ಜು ಗಾಯಕನಾಗಿ ಮಾತ್ರವಲ್ಲ, ನಾಯಕನಾಗಿಯೂ ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ ಎಂಬ ಸುದ್ದಿಗಳು ಈ ಹಿಂದೆ ಹರಿದಾಡುತ್ತಿದ್ದು, ಆದರೆ ನವೀನ್ ಸಜ್ಜು‌ ಮಾತ್ರ ಸೈಲೆಂಟ್ ಆಗಿಯೇ ಇದ್ದರು.

ಈಗ‌ ಸೈಲೆಂಟಾಗಿ‌ಯೇ‌ ಇದ್ದ ನವೀನ್ ಸಜ್ಜು ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ. ಈ‌ ಸಿನಿಮಾವು ಡಬಲ್ ಮೀನಿಂಗ್ ಕಾಮಿಡಿ, ಫ್ಯಾಮಿಲಿ ಓರಿಯಂಟೆಡ್‌. ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ನಿರ್ದೇಶಕ ಕುಮಾರ್ ಈಗ ನವೀನ್ ಅವರ ಚಿತ್ರಕ್ಕೂ ಆಕ್ಷನ್‌ ಕಟ್ ಹೇಳಲಿದ್ದಾರೆ. ಹಲವು ತಿಂಗಳ ಹಿಂದೆಯೇ ಶುರುವಾಗಬೇಕಾಗಿದ್ದ ಈ ಚಿತ್ರ ಕಾರಣಾಂತರಗಳಿಂದ ನಿಂತು ಹೋಗಿತ್ತು.

ಈಗ ಇದಕ್ಕೆ ಒಳ್ಳೆ ಮುಹೂರ್ತ ಕೂಡಿ ಬಂದಿದ್ದು ಕೆಲವು ದಿನಗಳ ಹಿಂದೆ ಆದಿಚುಂಚನಗಿರಿ ಕ್ಷೇತ್ರದಲ್ಲಿ ಚಿತ್ರಕಥೆಗೆ ಪೂಜೆ ಮಾಡಿಸಿಕೊಂಡ ಚಿತ್ರತಂಡ ಈಗ ಕೆಲ ಪ್ರಮುಖ ಕಲಾವಿದರು ಒಟ್ಟಾಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com