ಗಾಯಕ ನವೀನ್ ಸಜ್ಜು ಈಗ ‘ಮುತ್ತು’..!!!

Published on

517 Views

ಬಿಗ್ ಬಾಸ್ ರನ್ನರ್ ಗಾಯಕ ನವೀನ್ ಸಜ್ಜು ಇದೀಗ ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರೆ. ನವೀನ್ ಸಜ್ಜು ಈಗಾಗಲೇ ನಾಯಕನಾಗಿ‌ ತೆರೆ ಮೇಲೆ ಕಾಣಿಸಿಕೊಳ್ಳಬೇಕಿತ್ತು ಕಾರಣಾಂತರಗಳಿಂದ ಸ್ವಲ್ಪ ಲೇಟಾಗಿ ಎಂಟ್ರಿ ಕೊಟ್ಟಿರುವ ನವೀನ್ ಸಜ್ಜು ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದ ನಿರ್ದೇಶಕ ಕುಮಾರ್ ರವರ ಸಿನಿಮಾದಲ್ಲಿ ನಾಯಕನಾಗಿ‌ ಕಾಣಿಸಿಕೊಳ್ಳುತ್ತಿದ್ದಾರೆ.

ನವೀನ್ ಸಜ್ಜು ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾದ ಹೆಸರು ‘ಮ್ಯಾನ್ ಷನ್ ಹೌಸ್ ಮುತ್ತು’ ಈ ಸಿನಿಮಾದ ಹೆಸರಿನಂತೆ ಸಿನಿಮಾದ ಕಥೆಯೂ ವಿಭಿನ್ನವಾಗಿದ್ದು, ಒಂದು‌ ಮನೆಯ‌ ಸುತ್ತ‌ ನಡೆಯುವ ಕಥೆ ಎನ್ನುತ್ತಾರೆ‌ ನಿರ್ದೇಶಕರು. ಇಲ್ಲಿ ದೆವ್ವ ಪಿಶಾಚಿ ಏನು ಇಲ್ಲ. ಇದು ಪರಿಸರ ಪ್ರೇಮಿ ಮುತ್ತುವಿನ‌ ಸುತ್ತ ನಡೆಯುವ‌ ಕಥೆ ಎನ್ನುತ್ತಾರೆ ನವೀನ್‌ ಸಜ್ಜು. ಮಡಿಕೇರಿಯ‌ ರಮಣೀಯ ಸ್ಥಳದಲ್ಲಿ ಈಗಾಗಲೇ 25 ದಿನದ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ಇದೊಂದು ವಿಭಿನ್ನ ಪ್ರಯತ್ನವಾಗಿದ್ದು, ಉತ್ತಮ ಮನರಂಜನೆಯ ಜೊತೆಗೆ ಅತ್ಯುತ್ತಮ ಸಂದೇಶವಿದೆ ಎನ್ನುತ್ತಾರೆ ನಿರ್ದೇಶಕರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com