ಬಿಟೌನ್ ಗೆ ಹಾರಿದ‌ ರಶ್ಮಿಕಾ‌ ಮಂದಣ್ಣಗೆ ಸ್ವಾಗತ‌ ಕೋರಿದ ಸಿದ್ಧಾರ್ಥ್ ಮಲ್ಹೋತ್ರ

Published on

432 Views

‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ‌ ಕನ್ನಡಿಗರ‌ ಮನ‌ಗೆದ್ದಿರುವ ರಶ್ಮಿಕಾ ಮಂದಣ್ಣ ನಂತರ ದಕ್ಷಿಣದ ಸ್ಟಾರ್ ನಟರ ಜೊತೆ ನಟಿಸಿ, ಸೌತ್‌ ಇಂಡಸ್ಟ್ರಿಯಲ್ಲಿ ಖ್ಯಾತಿ ಗಳಿಸಿದರು. ಈಗ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಲು ಹೊರಟ್ಟಿದ್ದಾರೆ‌ ರಶ್ಮಿಕಾ. ಸಿದ್ಧಾರ್ಥ್ ಮಲ್ಹೋತ್ರ ನಟಿಸುತ್ತಿರುವ ಥ್ರಿಲರ್ ಸಿನಿಮಾ, ನೈಜ ಘಟನೆಯಾಧರಿತ ‘ಮಿಷನ್ ಮಜ್ನು’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ರಶ್ಮಿಕಾ‌ ಮಂದಣ್ಣ

ಈ ಸುದ್ದಿಯನ್ನು ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ರಶ್ಮಿಕಾ ಮಂದಣ್ಣರವರು ತಮ್ಮ‌ ಚೊಚ್ಚಲ ಹಿಂದಿ ‌ಸಿನಿಮಾದ ಮೊದಲು ಹಿಂದಿಯ‌ ಖ್ಯಾತ ರ್ಯಾಪರ್‌ ಬಾದ್ಶಾ ನಿರ್ಮಾಣದ ಹೊಸ‌ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಾಡಿನ‌ ಚಿತ್ರೀಕರಣ ಚಂಡೀಗಡದಲ್ಲಿ ನಡೆಯುತ್ತಿದೆ. ‘ಮಿಷನ್ ಮಜ್ನು’ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ‌ ಕೊಡುತ್ತಿರುವ ರಶ್ಮಿಕಾಗೆ ಚಿತ್ರದ ನಾಯಕ ಸಿದ್ಧಾರ್ಥ್ ಮಲ್ಹೋತ್ರ ಸ್ವಾಗತ ಕೋರಿದ್ದು, “ಮಿಷನ್ ಮಜ್ನು ತಂಡದ ಜೊತೆ‌ ನಿಮ್ಮನ್ನು‌ ನಮ್ಮ ತಂಡದಲ್ಲಿ ನೋಡಲು ಖುಷಿಯಾಗುತ್ತದೆ. ಅದಷ್ಟೂ ಬೇಗ ಸಿಗೋಣ” ಎಂದು‌ ಟ್ವೀಟ್ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com