ರಾಮನ ಅವತಾರ’ ದಲ್ಲಿ ರಿಷಿಗೆ ಜೊತೆಯಾದ ಶುಭ್ರ ಅಯ್ಯಪ್ಪ…

Published on

335 Views

ಶಿವರಾಜ್ ಕುಮಾರ್ ನಟನೆಯ ‘ವಜ್ರಕಾಯ’ ಸಿನಿಮಾದಲ್ಲಿ ಶಿವಣ್ಣ ಜೊತೆಗೆ ಖ್ಯಾತ ತಮಿಳು ನಟ ಧನುಷ್ ಹಾಡಿರುವ ಹಾಡಿಗೆ ಹೆಜ್ಜೆ ಹಾಕಿದ ಶುಭ್ರ ಅಯ್ಯಪ್ಪ ಕನ್ನಡದಲ್ಲಿ ನಟಿಸಿದು ಒಂದೇ ಚಿತ್ರವಾದರೂ, ಇದಕ್ಕೂ ಮೊದಲು ತಮಿಳು, ತೆಲುಗಿನಲ್ಲಿ ಒಂದೊಂದು ಚಿತ್ರದಲ್ಲಿ ಅಭಿನಯಿಸಿದ್ದರು.

‘ವಜ್ರಕಾಯ’ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ಶುಭ್ರ ಆ ಹಾಡಿನ ಮೂಲಕ ಸಿನಿರಸಿಕರ ಮನಗೆದ್ದಿದ್ದರು. ನಂತರ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರದ ಶುಭ್ರ ಅಯ್ಯಪ್ಪ ಸುನಿ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಮತ್ತೆ ಆ ಸುದ್ದಿ ಅಲ್ಲೇ ತಣ್ಣಗಾಯಿತು.

ಅದೇ ಏನೇ ಇರಲಿ ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡಲು ಬರುತ್ತಿದ್ದಾರೆ ‘ರಾಮನ ಅವತಾರ’ ಸಿನಿಮಾದ ಮೂಲಕ. ವಿಕಾಸ್ ಹಾಗೂ ವಿನಯ್ ಪಂಪಾವತಿ ನಿರ್ದೇಶನ ಮಾಡುತ್ತಿರುವ ವಿಭಿನ್ನ ಶೈಲಿಯ ಕಾಮಿಡಿ ಮ್ಯಾನರಿಸಂನಿಂದ ಸ್ಯಾಂಡಲ್ ವುಡ್ ನಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಲಿದ್ದಾರೆ. ‘ರಾಮನ ಅವತಾರ’ ಚಿತ್ರದಲ್ಲಿ ಮೂರು ಹೀರೋಗಳಿದ್ದು, ಅದರಲ್ಲಿ ‘ಒಂದು ಮೊಟ್ಟೆ ಕಥೆ’ ಖ್ಯಾತಿಯ ರಾಜ್ ಬಿ.ಶೆಟ್ಟಿ, ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ‘ಪ್ರೆಂಚ್ ಬಿರಿಯಾನಿ’ ಮೂಲಕ ಜನಮನ ಗೆದ್ದ ಡ್ಯಾನಿಷ್ ಸೇಟ್ ಮತ್ತು ‘ಅಪರೇಷನ್ ಆಲಮೇಲಮ್ಮ’ ಮತ್ತು ‘ಕವಲುದಾರಿ’ ಚಿತ್ರದ ನಾಯಕ ನಟ ರಿಷಿ ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಮೂವರು ನಾಯಕಿಯರು ಇದ್ದು, ರಿಷಿಗೆ ಜೋಡಿಯಾಗಿ ಗ್ಲಾಮರ್ ಬ್ಯೂಟಿ ಶುಭ್ರ ಅಯ್ಯಪ್ಪ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಬ್ಬ ನಾಯಕಿಯಾಗಿ ಪ್ರಣೀತಾ ಸುಭಾಷ್ ಕಾಣಿಸಿಕೊಳ್ಳಲಿದ್ದಾರೆ ಎಂದು ಬಲ್ಲ ಮೂಲ ಮೂಲಗಳಿಂದ ಕೇಳಿ ಬರುತ್ತಿದೆ. ಒಳ್ಳೆ ಕಥೆ ಪಾತ್ರಕ್ಕಾಗಿ ಕಾಯುತ್ತಿದ್ದ ಶುಭ್ರ ಅಯ್ಯಪ್ಪ ತಮ್ಮ ಕೆರಿಯರ್ ಅನ್ನು ‘ರಾಮನ ಅವತಾರದ’ ಮೂಲಕ ಮುಂದುವರಿಸಲಿದ್ದಾರೆ ಎನ್ನಬಹುದು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com