ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿರುವ ‘ಪವರ್ ಸ್ಟಾರ್’ ಚಿತ್ರದಲ್ಲಿ ಶ್ರೇಯಸ್ ಮಂಜು

Published on

620 Views

‘ಪಡ್ಡೆ ಹುಲಿ’ ಸಿನಿಮಾದ ಮೂಲಕ ನಾಯಕನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಈಗ ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ‌ ಬಿಡುಗಡೆಯಾಗುವ ‘ಪವರ್ ಸ್ಟಾರ್’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ನಿರ್ದೇಶಕ ಒಮರ್ ಲುಲು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಫ್ರೀ-ಪ್ರೊಡಕ್ಷನ್ ಕಾರ್ಯ ಸಾಗಿದೆ.

ಹಿರಿಯ ಕಥೆಗಾರ ಡೆನ್ನೀಸ್ ಜೋಸೆಪ್ ರವರು ಚಿತ್ರಕಥೆ ಬರೆದಿದ್ದು, ಸಾಹಸ ಪ್ರಧಾನ ಚಿತ್ರ ಇದಾಗಿದ್ದು, ವರ್ಚುವಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ರಾತೀಸ್ ಅನೆದಾತ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಲಯಾಳಂ ನಿರ್ದೇಶಕ ವಿ.ಕೆ ಪ್ರಕಾಶ್ ಮತ್ತು ಪ್ರಿಯಾ ವಾರಿಯರ್ ಜೊತೆಗೆ ಶ್ರೇಯಸ್ ಮಂಜು ಈಗಾಗಲೇ ‘ವಿಷ್ಣುಪ್ರಿಯ’ ಸಿನಿಮಾ ಮಾಡಿದ್ದು ಈ‌‌ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com