ಲವ್ ಅಲ್ಲಿ ಬಿದ್ದ ಶ್ರದ್ಧಾ

Published on

469 Views

ಲವ್ ಅಲ್ಲಿ ಬಿದ್ದ ಶ್ರದ್ಧಾ

ಶ್ರದ್ಧಾ ಶ್ರೀ ನಾಥ್ ಇನ್ನು ಸಿಂಗಲ್ ಆಗಿಯೇ ಇದ್ದಾರಾ? ಅವರಿಗೆ ಮದುವೆಯಾಗಿದೇಯಾ? ಎನ್ನುವ ಅನೇಕ ಪ್ರಶ್ನೆಗಳಿಗೆ ಶ್ರದ್ಧಾ ಉತ್ತರ ಕೊಟ್ಟಿದ್ದಾರೆ. ಹೌದು, ಶ್ರದ್ಧಾ ಶ್ರೀನಾಥ್ ಪ್ರೀತಿಯಲ್ಲಿ ಬಿದ್ದಿರುವ ಹುಡುಗ ರೋಹಿತ್ ಕೃಷ್ಣನ್ ಸಾಬು. ರೋಹಿತ್ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದು ಚೆನ್ನೈನಲ್ಲಿ ನೆಲೆಸಿದ್ದಾರೆ. ಈ ವಿಷಯವನ್ನು ಖುದ್ದು ಶ್ರದ್ಧಾ ‘ನಂಬರ್ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮ ದಲ್ಲಿ ಹೇಳಿದ್ದಾರೆ. ಯಾರಿಗೂ ಗೊತ್ತಿಲ್ಲದ ಸೀಕ್ರೆಟ್ ಹೇಳಿ ಎಂದು ಶಿವಣ್ಣ ಕೇಳಿದಾಗ , ಶ್ರದ್ಧಾ ತಮ್ಮ ಪ್ರೀತಿಯ ವಿಷಯ ವನ್ನು ಹೇಳಿದ್ದಾರೆ. ನಟಿ ಶ್ರದ್ಧಾ ಶ್ರೀನಾಥ್ ಮದುವೆ ಆಗಿದ್ದಾರೆ. ಮಗು ಇದೆ ಎಂಬ ಎಲ್ಲ ಗಾಸಿಪ್ ಗಳಿಗೂ ತೆರೆ ಎಳೆದಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳು ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ಮೂಗುತಿ‌ ಸುಂದರಿ ಶ್ರದ್ಧಾ ಈಗ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಟಿಗ್ಮಾಂಶು ದುಲಿಯಾ ನಿರ್ದೇಶನದ ‘ಮಿಲನ್ ಟಾಕೀಸ್’ ಎಂಬ ಸಿನಿಮಾದಲ್ಲಿ ಹಾಲಿವುಡ್ ನಟ ಅಲಿ ಪೈಜಲ್ ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com