ಶಿವು ಪಾರು ಈ ವಾರ ಬಿಡುಗಡೆ

Published on

326 Views

ಅಮೆರಿಕ ದೇಶದ ನಿವಾಸಿ ಅಮೆರಿಕ ಸುರೇಶ್ ಬಹಳ ಶಿಸ್ತಿನಿಂದ, ಆಸೆಯಿಂದ, ಬಲವಾದ ಕಾರಣಗಳನ್ನು ಇಟ್ಟುಕೊಂಡು ಮಾಡಿರುವ ಕನ್ನಡ ಸಿನಿಮಾ ಶಿವು ಪಾರು ಈ ವಾರ ತೆರೆ ಕಾಣುತ್ತಿದೆ.
ಶಿವು ಪಾರು ಒಂದು ರೊಮ್ಯಾಂಟಿಕ್ ಸಿನಿಮಾ ಅಲ್ಲದೆ ಪೌರಾಣಿಕವಾಗಿ ಬೆಸೆದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕ ಎಂದು ಬಣ್ಣಿಸುತ್ತಾರೆ.

ಸೂರಿ ಫಿಲ್ಮ್ಸ್ ಅಡಿಯಲ್ಲಿ ಶ್ರೀಮತಿ ಶೈಲಜ ಸುರೇಶ್ ನಿರ್ಮಾಣದ, ಹಾಲೇಶ್ ಛಾಯಾಗ್ರಹಣ, ಜೀವನ್ ಸಂಕಲನ, ಅಮೆರಿಕ ಸುರೇಶ್ ಗೀತ ಸಾಹಿತ್ಯ ಹಾಗೂ ಸಂಗೀತ, ವಿನೀತ್ ರಾಜ್ ಮೆನನ್ ಹಿನ್ನಲೆ ಸಂಗೀತ ನೀಡಿದ್ದಾರೆ.
`ಶಿವ ಪಾರು’ ಚಿತ್ರಕ್ಕೆ ಯಮನ ಗೆದ್ದ ಶಿವು, ದೇವಲೋಕದ ಪ್ರೇಮ ಲೋಕ, ಕಿಟ್ಟಪ್ಪ ಯಾಕೆ ಶಿವು ಹತ್ಯೆ ಮಾಡಿದ, ಯಾಕೆ ಪಾರು ಆತ್ಮಹತ್ಯೆ ಮಾಡಿಕೊಂಡಳು ? ವಿಚಾರಗಳು ಅಪಾರ ಕುತೂಹಲ ಹುಟ್ಟು ಹಾಕಿದೆ. ಅಮೆರಿಕ ಸುರೇಶ್ ಹಾಗೂ ದಿಶಾ ಪೂವಯ್ಯ ಮುಖ್ಯ ತಾರಗಣದ ಈ `ಶಿವು ಪಾರು’ ಸಿನಿಮಾದಲ್ಲಿ ಭವ್ಯ, ರಕ್ಷಿತಾ, ಮೇಘನ, ರಂಜಿತ, ಲಕ್ಷ್ಮಿ, ಸಿಮ್ರಾನ್, ವಂದನ, ನೇಹ,ಆರ್ತಿ, ಸೋನಿಯ, ಸ್ವಾತಿ, ಲೋಕೇಶ್, ರವಿ, ರಂಜನ ಹಿರಿಯ ನಟರುಗಳಾದ ಹೊನ್ನಾವಳ್ಳಿ ಕೃಷ್ಣ, ರಮೇಶ್ ಭಟ್, ಚಿತ್ರ ಶೆಣೈ,ವಿಶ್ವ, ಸುಂದರ್ ಹಾಗೂ ಇತರರು ಇದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com