ಶಿವು ಪಾರು ಪಡೆಯಿತು ಸೆನ್ಸಾರ್ ಮೆಚ್ಚುಗೆ
ಅಮೆರಿಕ ದೇಶದ ನಿವಾಸಿ ಅಮೆರಿಕ ಸುರೇಶ್ ಬಹಳ ಶಿಸ್ತಿನಿಂದ, ಆಸೆಯಿಂದ, ಬಲವಾದ ಕಾರಣಗಳನ್ನು ಇಟ್ಟುಕೊಂಡು ಮಾಡಿರುವ ಕನ್ನಡ ಸಿನಿಮಾ `ಶಿವು ಪಾರು’ ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರವನ್ನು ಪಡೆದುಕೊಂಡಿದೆ.
ಕಳೆದ 20 ವರ್ಷಗಳಿಂದ ಅಮೆರಿಕ ದೇಶದಲ್ಲಿ ಇದ್ದು ಹಾಲೀವುಡ್ ಅಲ್ಲಿ ಕೆಲಸ ಮಾಡಿ, ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಅನೇಕ ಕತೆಗಳನ್ನು ರಚಿಸಿ, ಅಮೆರಿಕ ಬ್ಯಾಂಕ್ ಅಲ್ಲಿ ಸಾಫ್ಟ್ ವೇರ್ ಆರ್ಕಿಟೆಕ್ಟ್ ಆಗಿ ಕೆಲಸ ನಿರ್ವಹಿಸಿರುವ ಹೊಸಕೋಟೆಯ ಈ ಅಮೆರಿಕ ಸುರೇಶ್ ಕನ್ನಡ ಸಿನಿಮಾ ಮಾಡುವ ಆಸೆ ಇಟ್ಟುಕೊಂಡು ಅಪಾರ ಶ್ರಮ ಸಹ ವ್ಯಯ ಮಾಡಿದ್ದಾರೆ. ಶಿವು ಪಾರು ಒಂದು ರೊಮ್ಯಾಂಟಿಕ್ ಸಿನಿಮಾ ಅಲ್ಲದೆ ಪೌರಾಣಿಕವಾಗಿ ಬೆಸೆದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕ ಎಂದು ಬಣ್ಣಿಸುತ್ತಾರೆ.
135 ನಿಮಿಷಗಳ ಈ `ಶಿವು ಪಾರು’ ಇತ್ತೀಚಿಗೆ ಫಿಲ್ಮ್ ಬಜಾರ್ ಅಲ್ಲಿ ಸಹ ಪ್ರದರ್ಶನ ಮಾಡಿ ಪ್ರಶಂಸೆಗೆ ಒಳಗಾಗಿತ್ತು. ಇದು ಈಗಾಗಲೇ ಅನೇಕ ಸಿನಿಮಾ ಉತ್ಸವಗಳಲ್ಲಿ ಪಾಲ್ಗೊಳ್ಳಲು ಸಿದ್ದತೆ ಮಾಡಿಕೊಂಡಿದೆ. ಕನ್ನಡ ಸಿನಿಮಾಕ್ಕೆ ಆಂಗ್ಲ ಭಾಷೆಯ ಸಬ್ ಟೈಟಲ್ ಸಹ ಮಾಡಲಾಗಿದೆ.
ಸೂರಿ ಫಿಲ್ಮ್ಸ್ ಅಡಿಯಲ್ಲಿ ಶ್ರೀಮತಿ ಶೈಲಜ ಸುರೇಶ್ ನಿರ್ಮಾಣದ, ಹಾಲೇಶ್ ಛಾಯಾಗ್ರಹಣ, ಜೀವನ್ ಸಂಕಲನ, ಅಮೆರಿಕ ಸುರೇಶ್ ಗೀತ ಸಾಹಿತ್ಯ ಹಾಗೂ ಸಂಗೀತ, ವಿನೀತ್ ರಾಜ್ ಮೆನನ್ ಹಿನ್ನಲೆ ಸಂಗೀತ ನೀಡಿದ್ದಾರೆ.
`ಶಿವ ಪಾರು’ ಚಿತ್ರಕ್ಕೆ ಯಮನ ಗೆದ್ದ ಶಿವು, ದೇವಲೋಕದ ಪ್ರೇಮ ಲೋಕ, ಕಿಟ್ಟಪ್ಪ ಯಾಕೆ ಶಿವು ಹತ್ಯೆ ಮಾಡಿದ, ಯಾಕೆ ಪಾರು ಆತ್ಮಹತ್ಯೆ ಮಾಡಿಕೊಂಡಳು? ವಿಚಾರಗಳು ಅಪಾರ ಕುತೂಹಲ ಹುಟ್ಟು ಹಾಕಿದೆ. ಅಮೆರಿಕ ಸುರೇಶ್ ಹಾಗೂ ದಿಶಾ ಪೂವಯ್ಯ ಮುಖ್ಯ ತಾರಗಣದ ಈ `ಶಿವು ಪಾರು’ ಸಿನಿಮಾದಲ್ಲಿ ಭವ್ಯ, ರಕ್ಷಿತಾ, ಮೇಘನ, ರಂಜಿತ, ಲಕ್ಷ್ಮಿ, ಸಿಮ್ರಾನ್, ವಂದನ, ನೇಹ,ಆರ್ತಿ, ಸೋನಿಯ, ಸ್ವಾತಿ, ಲೋಕೇಶ್, ರವಿ, ರಂಜನ ಹಿರಿಯ ನಟರುಗಳಾದ ಹೊನ್ನಾವಳ್ಳಿ ಕೃಷ್ಣ, ರಮೇಶ್ ಭಟ್, ಚಿತ್ರ ಶೆಣೈ, ವಿಶ್ವ, ಸುಂದರ್ ಹಾಗೂ ಇತರರು ಇದ್ದಾರೆ. ?ಪ್ಯಾಟೆ ಹುಡ್ಗಿರ್ ಹಳ್ಳಿಗ್ ಬಂದ್ರು? 6 ನೇ ಕಂತು ರಿಯಾಲಿಟಿ ಕಾರ್ಯಕ್ರಮ ಸಹ ಚಿತ್ರದ ಅಂಶಗಳಲ್ಲಿ ಒಂದು.