Shivaraj Kumar-Peddi – ಪೆಡ್ಡಿ ಸಿನಿಮಾ ಹೊಸ ಅವತಾರದಲ್ಲಿ

Published on

734 Views

Shivaraj kumar-Peddi- New look – ಪೆಡ್ಡಿ ಸಿನಿಮಾ ಹೊಸ ಅವತಾರದಲ್ಲಿ ಶಿವರಾಜ್ ಕುಮಾರ್

Shivaraj Kumar-Peddi – ಪೆಡ್ಡಿ ಸಿನಿಮಾ ಹೊಸ ಅವತಾರದಲ್ಲಿ ಶಿವರಾಜ್ ಕುಮಾರ್-ಪೆಡ್ಡಿ ಚಿತ್ರದಲ್ಲಿ ಶಿವರಾಜ್ ಕುಮಾರ್ (Shivarj kumar) ಗೌರ್ ನಾಯ್ಡು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, 2026ರ ಮಾರ್ಚ್ 27ರಂದು ಬಿಡುಗಡೆಯಾಗಲಿದೆ.  ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್  ಗೌರ್ ನಾಯ್ಡು ಪಾತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಈ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. Peddi -ಪೆಡ್ಡಿ ಎಂಬ ಈ ಗ್ರಾಮೀಣ ಕ್ರೀಡಾ ನಾಟಕವನ್ನು ನಿರ್ದೇಶಿಸುತ್ತಿರುವವರು ‘ಉಪ್ಪೆನ್ನಾ’ ಖ್ಯಾತಿಯ ಬುಚಿ ಬಾಬು ಸಾನಾ. ಚಿತ್ರದಲ್ಲಿ ಮೆಗಾಪವರ್ ಸ್ಟಾರ್ ರಾಮ್ ಚರಣ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಜಾನ್ವಿ ಕಪೂರ್, ಜಗಪತಿ ಬಾಬು, ಮತ್ತು ದಿವ್ಯೇಂದ್ರು ಶರ್ಮಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೆಡ್ಡಿ ಚಿತ್ರವು ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಅವರ ಜೋಡಿಯ ಮೊದಲನೇ ಸಿನಿಮಾ. ಇದು ಜಾನ್ವಿ ಕಪೂರ್‌ ಅವರ ತೆಲುಗು ಡೆಬ್ಯೂ ಸಿನಿಮಾ ಕೂಡ. ಈ ಜೋಡಿಯನ್ನು ಹೀಗಾಗಿಯೇ “fresh pair” ಆಗಿ ಟಾಲಿವುಡ್‌ನಲ್ಲಿ ಹೆಚ್ಚು ನಿರೀಕ್ಷೆಯಿಂದ ನೋಡಲಾಗುತ್ತಿದೆ.

ಈ ಚಿತ್ರಕ್ಕೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಅವರ ಹಾಡು ಹಾಗೂ ಪ್ರತಿ ದೃಶ್ಯವನ್ನೂ ಎತ್ತಿ ತೋರಿಸುವ ಕೆಲಸವನ್ನು ಆರ್. ರತ್ನವೇಲು ಅವರ ಛಾಯಾಗ್ರಹಣ ಮಾಡುತ್ತಿದೆ.

 

Shivarj kumar as a Gour Naidu- ಸಿನಿರಂಗದ ಸ್ಫೂರ್ತಿ: ಶಿವಣ್ಣ ‘ಗೌರ್ ನಾಯ್ಡು’ ಆಗಿ

ಗೌರ್ ನಾಯ್ಡು ಎಂಬ ಪಾತ್ರ ಶಕ್ತಿಶಾಲಿ, ಪ್ರಭಾವಶಾಲಿ, ಮತ್ತು ಮನಸ್ಸಲ್ಲಿ ಉಳಿಯುವಂತಹದು.ಈ ಪಾತ್ರದ ಮೂಲಕ ಶಿವಣ್ಣ, ಕನ್ನಡಿಗರಿಗಿಂತಲೂ ಬೇರೆಯ ಭಾಷೆಗಳಲ್ಲಿಯೂ ತಮ್ಮ ಹಾದಿಯನ್ನು ಬಲಪಡಿಸುತ್ತಿದ್ದಾರೆ. ಅವರ ನಟನೆಯ ವೈಶಿಷ್ಟ್ಯತೆ, ನಗು, ಕಠಿಣತೆ, ಹಾಗೂ ದಿಟ್ಟತೆಯ ಮಿಶ್ರಣ ಈ ಪಾತ್ರದಲ್ಲಿ ಕಾಣಸಿಗಲಿದೆ.

 

Shivaraj Kumar_Ghost And Jailer

ಇತ್ತೀಚಿನ ವರ್ಷಗಳಲ್ಲಿ, ಅವರು ಕನ್ನಡಕ್ಕೆ ಮಾತ್ರ ಸೀಮಿತವಾಗದೆ, ಪಾನ್-ಇಂಡಿಯಾ ಹೀರೋ ಆಗಿ ತಮ್ಮ ಸ್ಥಾನವನ್ನು ಬಲಪಡಿಸುತ್ತಿದ್ದಾರೆ.
ಘೋಸ್ಟ್- ಕನ್ನಡ ಆಕ್ಷನ್ ಥ್ರಿಲ್ಲರ್ ಚಿತ್ರವು ತೆಲುಗು ಭಾಷೆಯಲ್ಲಿಯೂ ಬಿಡುಗಡೆಗೊಂಡಿತು.ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಡಾರ್ಕ್, ಸ್ಟೈಲಿಷ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ತೆಲುಗಿನಲ್ಲಿ ಈ ಚಿತ್ರದ ಟ್ರೇಲರ್ ಕೂಡ ಟ್ರೆಂಡ್ ಆಗಿತ್ತು ಹಾಗೆಯೇ ಇದು ಪಾನ್ಇಂಡಿಯಾ ಚಿತ್ರದಂತೆ ಬಿಡುಗಡೆಯಾಗಿತ್ತು.
ಹಾಗೆಯೇ ಜೈಲರ್ – ಇದು ತಮಿಳು ಸೂಪರ್‌ಸ್ಟಾರ್ ರಜಿನಿಕಾಂತ್ ಅವರ ಚಿತ್ರ.ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು “ಮಹಾದೇವ” ಎಂಬ ಪಾತ್ರದಲ್ಲಿ ಥಂಡರ್ ಎಂಟ್ರಿ ಕೊಟ್ಟಿದ್ದರು.ಚಿತ್ರ ತೆಲುಗು ಭಾಷೆಯಲ್ಲಿ ಡಬ್ ಆಗಿ ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿತು.ಅವರ ಪಾತ್ರ ತೆಲುಗಿನಲ್ಲಿ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆದಿತ್ತು.

ಟಾಲಿವುಡ್‌ನ ಮೇಗಾ ಪವರ್ ಸ್ಟಾರ್ ರಾಮ್ ಚರಣ್ ಅವರು RRR (2022) ಚಿತ್ರದ ನಂತರ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರೀ ಜನಪ್ರಿಯರಾಗಿದ್ದಾರೆ.

“ಪೆಡ್ಡಿ” ಚಿತ್ರದ ಮೂಲಕ ಅವರು ಮತ್ತೊಂದು ಭಿನ್ನ ಧ್ವನಿಯ rural character (ಗ್ರಾಮೀಣ ಪಾತ್ರ) ನ ತಾಳಮೇಳ ತೋರಿಸುತ್ತಿದ್ದಾರೆ.ಚಿತ್ರದ ಕಥೆಯು ಕ್ರೀಡಾ ಹಿನ್ನೆಲೆಯಿರುವ ಕಾರಣ, ರಾಮ್ ಚರಣ್‌ ಅವರ ಫಿಟ್ನೆಸ್ ಮತ್ತು ಆಧಾರಿತ ಅಭಿನಯಕ್ಕೆ ಇದು ಪರ್ಫೆಕ್ಟ್ ಎನಿಸುತ್ತದೆ.

“ಪೆಡ್ಡಿ” ಬಾಲಿವುಡ್‌ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಅವರ ಮೊದಲ ತೆಲುಗು ಸಿನಿಮಾ. ಈ ಚಿತ್ರದ ಮೂಲಕ ಅವರು ದಕ್ಷಿಣ ಚಿತ್ರರಂಗದಲ್ಲಿ ಪಕ್ಕಾ ಎಂಟ್ರಿ ಕೊಡುವ ಪ್ರಯತ್ನದಲ್ಲಿದ್ದಾರೆ.ಶೂಟಿಂಗ್ ವೇಳೆ ತೆಗೆದಿರುವ ಕೆಲವು unofficial ಹಾಗೂ ಫ್ಯಾನ್ ಪೇಜ್‌ಗಳಲ್ಲಿ ಹರಡಿದ ಫೋಟೋಗಳು ಜಾನ್ವಿಯ ಪಾತ್ರ ಗ್ರಾಮೀಣ ಶೈಲಿ ಆಗಿರಬಹುದೆಂದು ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಹುಟ್ಟಿಸುತ್ತಿವೆ.

🌍 Shivaraj kumar-Peddi Pan india relese ಪೆಡ್ಡಿ: ಬಹುಭಾಷಾ ಬಿಡುಗಡೆ

ಪೆಡ್ಡಿ ಚಿತ್ರವು ಕನ್ನಡ, ತೆಲುಗು, ತಮಿಳು, ಹಿಂದಿ, ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ಬಿಂಗ್ ಆಗಿ 2026ರ ಮಾರ್ಚ್ 27ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಇದು ತಾಂತ್ರಿಕತೆಯಲ್ಲಿ ಶ್ರೇಷ್ಠ ಹಾಗೂ ಕಥಾನಕದಲ್ಲಿ ಭಾವನಾತ್ಮಕ ಶಕ್ತಿ ಹೊಂದಿರುವ ಸಿನಿಮಾ ಆಗಿದೆ.
ಪೆಡ್ಡಿ ಸಿನಿಮಾದಲ್ಲಿ ಗೌರ್ ನಾಯ್ಡು ಪಾತ್ರವು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ ಹಾಗೂ ಶಿವರಾಜ್ ಕುಮಾರ್ ಅವರ ಹೊಸ ಅಭಿನಯದ ಮೆರಗು ಜನರ ಕಣ್ಮನ ತಂಪುಗೊಳಿಸಲಿದೆ. ಈ ಸಿನಿಮಾ ಕನ್ನಡಿಗರಿಗೆ ಮಾತ್ರವಲ್ಲ, ಭಾರತದಾದ್ಯಂತ ಚಲನಚಿತ್ರ ಪ್ರೇಮಿಗಳಿಗೆ ಭಾವನಾತ್ಮಕ ಅನುಭವವಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com