4 ತಿಂಗಳು ಬ್ರೇಕ್ ತೆಗೆದುಕೊಳ್ಳಲು ಶಿವಣ್ಣ ನಿರ್ಧಾರ
ಶಸ್ತ್ರಚಿಕಿತ್ಸೆಗೆ ಲಂಡನ್ಗೆ ತೆರಳುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಾಲ್ಕು ತಿಂಗಳ ಕಾಲ ಚಿತ್ರರಂಗದ ಚಟುವಟಿಕೆಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಕಳೆದ 33 ವರ್ಷಗಳಿಂದ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವ ನಟ ಡಾ!! ಶಿವರಾಜಕುಮಾರ್ ಇದುವರೆಗೆ ಒಮ್ಮೆಯೂ ತಮ್ಮ ವೃತ್ತಿಯಲ್ಲಿ ಸ್ವಲ್ಪವೂ ವಿರಾಮ ತೆಗೆದುಕೊಂಡಿಲ್ಲ. ಆದರೆ, ಈಗ ಟಗರು ಶಿವಣ್ಣ ನಾಲ್ಕು ತಿಂಗಳ ಬ್ರೇಕ್ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣ ಶಸ್ತ್ರ ಚಿಕಿತ್ಸೆ.
ಹೌದು, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಲಂಡನ್ಗೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆ ಅವರು ನಾಲ್ಕು ತಿಂಗಳು ಸಿನಿಮಾ ಚಟುವಟಿಕೆಗಳಿಂದ ದೂರವಿರಲು ತೀರ್ಮಾನಿಸಿದ್ದಾರೆ. ಡಾ. ರಾಜಕುಮಾರ್ ಅವರ ಅಪಹರಣ ನಡೆದ ಸಂದರ್ಭದಲ್ಲಿ 108 ದಿನಗಳ ಕಾಲ ಚಿತ್ರರಂಗದ ಚಟುವಟಿಕೆಯೇ ನಿಂತು ಹೋಗಿತ್ತು. ಅಂದು ಚಿತ್ರೀಕರಣದಿಂದ ದೂರ ಉಳಿದದ್ದು ಬಿಟ್ಟರೆ, ಶಿವಣ್ಣ ಚಿತ್ರರಂಗದ ಚಟುವಟಿಕೆಯಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದು ಯಾವತ್ತು ಹೇಳಿದವರಲ್ಲ.
ಶಿವಣ್ಣ ಈ ಹಿಂದೆ ಲಂಡನ್ಗೆ ಹೋಗಿದ್ದಾಗ ಅಲ್ಲಿ ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದರು. ಮಾತ್ರೆ ತೆಗೆದುಕೊಂಡರು ಇದರ ನೋವು ಕಡಿಮೆಯಾಗುತ್ತಿಲ್ಲವಂತೆ. ಹಾಗಾಗಿ ವೈದ್ಯರ ಸಲಹೆ ಮೇರೆಗೆ ಜುಲೈ ಮೊದಲ ವಾರದಲ್ಲಿ ಅವರು ಲಂಡನ್ಗೆ ಹೊರಡಿಲಿದ್ದಾರೆ. ಅಲ್ಲಿಂದ ಬಂದ ನಂತರ ಕೆಲವು ತಿಂಗಳು ವಿರಾಮ ಪಡೆಯುತರಂತೆ.
ಈಗತಾನೇ ‘ಭಜರಂಗಿ 2’ ಶೂಟಿಂಗ್ ಶುರುವಾಗಿದೆ. ಈ ಚಿತ್ರಕ್ಕಾಗಿ 15 ದಿನ ಚಿತ್ರೀಕರಣ ಮಾಡಿ ಆ ಬಳಿಕ ಲಂಡನ್ಗೆ ಹೊರಡುತ್ತಿದ್ದೇನೆ. ‘ರುಸ್ತುಂ’ ಈಗ ಬಿಡುಗಡೆಗೆ ಸಿದ್ಧವಾಗಿದೆ. ‘ಟಗರು’ ಸಿನಿಮಾದಲ್ಲಿ ಮಾಡಿದ ಪೊಲೀಸ್ ಪಾತ್ರಕ್ಕೂ ಈ ‘ರುಸ್ತುಂ’ ಅಲ್ಲಿ ರಗ್ಗಡ್ ಆದ ಪೊಲೀಸ್ ಅಧಿಕಾರಿ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇದೆ. ಇದೊಂದು ರೀತಿ ಆ್ಯಂಗ್ರಿ ಯಂಗ್ ಮನ್ ಪೊಲೀಸ್ ಅಧಿಕಾರಿ. ಸ್ವತಃ ಸಾಹಸ ನಿರ್ದೇಶಕರೂ ಆಗಿರುವ ರವಿ ವರ್ಮ ಒಂದು ವಿಭಿನ್ನ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಅದು ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಸೆಂಚುರಿ ಸ್ಟಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.