ಶಿವಾಜಿ ಸೂರತ್ಕಲ್ ಆಗಸ್ಟ್ 7 ರಂದು ZEE5 ಒಟಿಟಿಯಲ್ಲಿ ಬಿಡುಗಡೆ
Shivaji Surathkal: The Case of Ranagiri Rahasya
ಕನ್ನಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ರಮೇಶ್ ಅರವಿಂದ್ ಅಭಿನಯದ ತನಿಖಾ ಥ್ರಿಲ್ಲರ್ ಶಿವಾಜಿ ಸೂರತ್ಕಲ್ ಆಗಸ್ಟ್ 7 ರಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ZEE5 ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ನಿರ್ಮಾಪಕರಾದ ಅನುಪ್ ಗೌಡ ಮತ್ತು ರೇಖಾ ಕೆ.ಎನ್. ಅದನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡದೇ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದರು. ಆದರೆ ಲಾಕ್‌ಡೌನ್ ವಿಸ್ತರಣೆಯಾದ ಕರಣ OTT ಅಲ್ಲಿ ಬಿಡುಗಡೆ ಮಾಡಿದ್ದಾರೆ.

Shivaji Surathkal: The Case of Ranagiri Rahasya (Kannada film) to Stream Online on Zee5 from August 7
ಆಕಾಶ್ ಶ್ರೀವತ್ಸ ನಿರ್ದೇಶನದ, ಜುದಾ ಸ್ಯಾಂಡಿ ಸಂಗೀತ ಮತ್ತು ಗುರುಪ್ರಸಾದ್ ಎಂ.ಜಿ ಅವರ ಛಾಯಾಗ್ರಹಣ, ಜೊತೆಗೆ ರಾಧಿಕಾ ನಾರಾಯಣ್ ಮತ್ತು ಆರೋಹಿ ನಾರಾಯಣ್ ಅವರನ್ನೂ ಸಹ ಒಳಗೊಂಡಿದೆ.
ಇದರ ಮದ್ಯೆ ಈ ಚಿತ್ರವು ಹಿಂದಿಯಲ್ಲಿ ತಯಾರಾಗಲಿದೆ. ಪ್ರೊಡಕ್ಷನ್ ಹೌಸ್ ಬಿ 4 ಯು ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದೆ ಮತ್ತು ಉತ್ತರ ಭಾರತೀಯ ಭಾಷೆಗಳಿಗೆ ಡಬ್ಬಿಂಗ್ ಹಕ್ಕುಗಳನ್ನು ಸಹ ಪಡೆದುಕೊಂಡಿದೆ.
ಈ ಚಿತ್ರವನ್ನು ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ರಿಮೇಕ್ ಮಾಡುವ ಸಾಧ್ಯತೆಯಿದೆ. ಇದು ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಚರ್ಚೆಯಾಗುತ್ತಿದೆ.
ಇದಲ್ಲದೆ, ನಟ ಮತ್ತು ನಿರ್ದೇಶಕರು ಇದರ ಮುಂದುವರಿದ ಭಾಗಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ, ಮತ್ತು ಈ ಜೋಡಿ ಪ್ರಸ್ತುತ ಚಿತ್ರಕಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.