ಜೂ.15ಕ್ಕೆ “ಶತಾಯ ಗತಾಯ” ಚಿತ್ರ ಬಿಡುಗಡೆ

Published on

257 Views

ಇತ್ತೀಚೆಗೆ ಬರುತ್ತಿರುವ ಬಹುತೇಕ ಯುವ ಪ್ರತಿಭೆಗಳ ಚಿತ್ರಗಳನ್ನು ಪ್ರೇಕ್ಷಕರು ಗೆಲ್ಲಿಸಿದ್ದಾರೆ. ಆ ನಿಟ್ಟಿನಲ್ಲಿ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರಗಳನ್ನ ಪ್ರೇಕ್ಷಕರು ಕೈ ಹಿಡಿದಿದ್ದಾರೆ. ಈಗ ಅಂತಹದ್ದೇ ಸಾಲಿನಲ್ಲಿ “ಶತಾಯ ಗತಾಯ” ಚಿತ್ರ ಅದ್ಧೂರಿಯಾಗಿ ಇದೇ ಹದಿನೈದು ರಂದು ರಾಜ್ಯದಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಡಿಪ್ಲೊಮಾ ಇನ್ ಆಟೊಮೊಬೈಲ್ ಮಾಡಿರುವ ಯುವ ಪ್ರತಿಭೆ ಸಂದೀಪ್ ಗೌಡ ಸುಮಾರು ನಾಲ್ಕು ಕಿರುಚಿತ್ರಗಳನ್ನು ನಿರ್ದೇಶಿಸಿ ಈಗ ಪೂರ್ಣ ಪ್ರಮಾಣದ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ.

ಇದೊಂದು ಸಸ್ಪೆನ್ಸ್ ಚಿತ್ರವಾಗಿದ್ದು , ತಾಯಿ ಮಗನ ಸೆಂಟಿಮೆಂಟ್ ಮುಖ್ಯ ಕಥಾ ಹಂದರವಾಗಿದೆ.ಸುಮಾರು 60 ವರ್ಷ ಹಿಂದೆ ನಡೆದಂತಹ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು , ತಾಯಿಗೆ ಆದ ಅನ್ಯಾಯದ ವಿರುದ್ಧ ಮಗ ಸೇಡನ್ನು ತೀರಿಸಿಕೊಳ್ಳುವ ಎಳೆ ಈ ಚಿತ್ರದಲ್ಲಿದೆಯಂತೆ.ಇದರೊಂದಿಗೆ ಕಾಮಿಡಿ ಟಚ್ ಕೂಡ ಸಾಗಲಿದ್ದು, ಈ ಚಿತ್ರದಲ್ಲಿ ರಘು ರಾಮಪ್ಪ ನಾಯಕನಾಗಿದ್ದು, ಸೋನಿಕಾ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com