ತೆರೆಗೆ ಬರಲು ಸಜ್ಜಾದ ‘ಶಕೀಲಾ’
90ರ ದಶಕದ ಹಾಟ್ ನಟಿ, ನೀಲಿ ಚಿತ್ರಗಳ ತಾರೆ ಎಂದು ಗುರುತಿಸಿಕೊಂಡಿರುವ ಶಕೀಲಾರವರ ಜೀವಾನಧರಿತ ಕಥೆ ಈಗ ಸಿನಿಮಾವಾಗುತ್ತಿದೆ. ಆ ಕಾಲದಲ್ಲಿ ಅವರ ನಟನಾ ಬದುಕು ಹೇಗಿತ್ತು ಎಂಬುದನ್ನು ತೋರಿಸ ಹೊರಟ್ಟಿದ್ದಾರೆ ಇಂದ್ರಜಿತ್ ಲಂಕೇಶ್.
ಶಕೀಲಾ ಪಾತ್ರದಲ್ಲಿ ಬಾಲಿವುಡ್ ನಟಿ ರಿಚಾ ಚಡ್ಡಾ ನಟಿಸಲಿದ್ದು, ಪಂಕಜ್ ತ್ರಿಪಾಠಿ, ಮಲಯಾಳಂನ ರಾಜೀವ್ ಪಿಳ್ಳೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ತೆರೆಗೆ ಬರಲಿದೆ. ಈಗಾಗಲೇ ‘ಶಕೀಲಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆಯನ್ನು ಪಡೆದಿದೆ. ಚಿತ್ರದ ಚಿತ್ರೀಕರಣ ಮುಗಿದಿದ್ದು, ಡಿಸೆಂಬರ್ 25ಕ್ಕೆ ತೆರೆಗೆ ಬರಲು ಸಜ್ಜಾಗಿದೆ.