Old Monk : ‘ಓಲ್ಡ್‌ ಮಾಂಕ್’ ನಲ್ಲಿ‌ ಹಿರಿಯ‌ ನಟ‌‌ ರಾಜೇಶ್‌

Published on

478 Views

Old Monk : ‘ಓಲ್ಡ್‌ ಮಾಂಕ್’ ನಲ್ಲಿ‌ ಹಿರಿಯ‌ ನಟ‌‌ ರಾಜೇಶ್‌

ಎಂಜಿ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ‘ಓಲ್ಡ್‌ ಮಾಂಕ್’ ಚಿತ್ರದಲ್ಲಿ ಹಿರಿಯ ನಟ ರಾಜೇಶ್ ನಟಿಸುತ್ತಿದ್ದಾರೆ‌ ಎಂಬ ಸುದ್ದಿ ಚಿತ್ರತಂಡದಿಂದ ಕೇಳಿಬಂದಿದೆ. ರಾಜೇಶ್ ಅವರಂತಹ‌ ಹಿರಿಯ ನಟರಿಗೆ‌ ನಿರ್ದೇಶನ ಮಾಡುವುದು ನನ್ನ‌ ಅದೃಷ್ಟ. ಸಿನಿಮಾದಲ್ಲಿ ನಟಿಸಲು‌ ಒಪ್ಪಿಗೆ‌ ನೀಡಿದ್ದಕ್ಕೆ ಧನ್ಯವಾದಗಳು ಎಂದರು ನಿರ್ದೇಶಕರು.

88 ವರ್ಷದ ‌ರಾಜೇಶ್ ರವರು ದಶಕಗಳ‌ ನಂತರ‌ ಮತ್ತೆ ಬಣ್ಣ‌ ಹಚ್ಚುತ್ತಿದ್ದು, ಉಳಿದಂತೆ‌ ತಾರಾಗಣದಲ್ಲಿ ಅರುಣ್‌ ಬಾಲರಾಜ್, ಹಿರಿಯ ನಟ ಎಸ್. ನಾರಾಯಣ್, ಸಿಹಿಕಹಿ‌ಚಂದ್ರು, ಆರ್‌ ಟಿ ರಮಾ, ಡಿಂಗ್ರಿ ನಾಗರಾಜ್ ಮುಂತಾದವರು ನಟಿಸುತ್ತಿದ್ದಾರೆ. ಟಾಕಿ ಭಾಗ ಹಾಗೂ ಸಾಂಗ್ ಶೂಟ್ ಜನವರಿ ತಿಂಗಳಲ್ಲಿ ಪೂರ್ಣಗೊಳಿಸುವ ಯೋಜನೆಯಲ್ಲಿದೆ ಚಿತ್ರತಂಡ.

ಜನವರಿ 15ರಿಂದ ಹಿರಿಯ‌ನಟ ರಾಜೇಶ್ ರವರು‌ ಚಿತ್ರೀಕರಣ ದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರದ ‌ನಿರ್ದೇಶಕ ಶ್ರೀನಿವಾಸ್ ‌ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಲಯಾಳಂ ‌ನಟ‌ ಸುದೇವ್ ನಾಯರ್ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ವಿಲನ್ ಆಗಿ‌ ಕಾಣಿಸಿಕೊಂಡಿದ್ದು, ನಾಯಕಿಯಾಗಿ‌ ಅದಿತಿ ಪ್ರಭುದೇವ್ ಕಾಣಿಸಿಕೊಳ್ಳಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com