ಸೆಟ್ಟೇರಿದ ‘ಸಾವಿತ್ರಿ’
‘ಕೊರೋನ’ ದೆಸೆಯಿಂದ ಸ್ವಲ್ಪ ಕಾಲ ಸ್ಥಗಿತಗೊಂಡಿದ್ದ ಕನ್ನಡ ಚಿತ್ರರಂಗ ಮತ್ತೆ ಚಾಲ್ತಿಯಲ್ಲಿದೆ. ಅಂದರೆ ಮತ್ತೆ ಸಿನಿಮಾಗಳು ಆರಂಭವಾಗುತ್ತಿವೆ. ಚಿತ್ರರಂಗ ಚುರುಕುತನ ಕಾಣುತ್ತಿದೆ. ಅದಕ್ಕೆ ಒಂದು ಉದಾಹರಣೆಯೆಂದರೆ “ಸಾವಿತ್ರಿ”. ಸಾವಿತ್ರಿ ಎಂದಾಕ್ಷಣ ನಿಮಗೆ ಸತ್ಯವಾನ್ ಸಾವಿತ್ರಿ ಅಥವಾ ಸಾವಿತ್ರಿ ಬಾ ಪುಲೆ ನೆನಪಾಗಬಹುದು ಆದರೆ. ಇಲ್ಲಿಯ ‘ಸಾವಿತ್ರಿ’ ಶೀರ್ಷಿಕೆಯಡಿ ಆರಂಭವಾಗಿರುವ ಚಿತ್ರದ ಆಶಯವೆ ಬೇರೆ. ಆಧುನಿಕ ತಂತ್ರಜ್ಞಾನ, ನಗರ ಜೀವನದ ಒತ್ತಡ ಇತ್ಯಾದಿ ಕಾರಣಗಳಿಂದ ಮಕ್ಕಳ ಮನಸಿನ ಮೇಲೆ ಉಂಟಾಗಬಹುದಾದ ಪರಿಣಾಮದ ಕುರಿತು ಈ ಚಿತ್ರದಲ್ಲಿ ಚರ್ಚಿಸಲಾಗುತ್ತದೆ ಎಂಬುದು ನಿರ್ದೇಶಕರ ಅಂಬೋಣ.
ಹಿರಿಯ ನಟಿ ತಾರಾ ‘ಸಾವಿತ್ರಿ’ಯಾಗಿ ನಟಿಸುತ್ತಿದ್ದು, ಸಾಫ್ಟ್ ವೇರ್ ಕಂಪನಿಯ ಸಿ.ಈ.ಓ ಪಾತ್ರದಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಿಅಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ಕೋಲ್ಕತ್ತಾ ಮೂಲದ ಊರ್ವಶಿ ರೈ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಬೇಬಿ ನೈಲಾ ಪ್ರಮೋದ್, ಸಂಜು ಬಸಯ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸುತ್ತಿದ್ದಾರೆ. ನವೆಂಬರ್ ೧೯ರಂದು ಮುಹೂರ್ತ ಆಚರಿಸಿಕೊಂಡ ಈ ಚಿತ್ರವು ಬೆಂಗಳೂರು ಸುತ್ತಮುತ್ತ ನಲವತ್ತೈದು ದಿನಗಳ ಕಾಲ ಚಿತ್ರೀಕರಣವಾಗಲಿದೆ. ‘ನಿನಗಾಗಿ ಚಿತ್ರದ ನಂತರ ತಾರಕ್ಕನ ಜೊತೆ ಸ್ಕ್ರೀನ್ ಹಂಚಿಕೊಳ್ಳಲು ಖುಷಿಯಾಗುತ್ತಿದೆ’ ಅಂತ ನಟ ವಿಜಯ ರಾಘವೇಂದ್ರ ತಮ್ಮ ಸಂತಸವನ್ನು ಹೇಳಿಕೊಂಡರೆ “ವಿಜಯ್ ರಾಘವೇಂದ್ರ ಬಾಲ್ಯದಿಂದಲೇ ಉತ್ತಮ ಕಲಾವಿದ. ಚಿಕ್ಕಂದಿನಲ್ಲೇ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದ್ದಾರೆ. ನಂಗೂ ಅವರ ಜೊತೆ ಮತ್ತೆ ತೆರೆ ಹಂಚಿಕೊಳ್ಳಲು ಖುಷಿಯಾಗುತ್ತದೆ’ ಎಂಬುದು ತಾರಾ ಅವರ ಅನ್ನಿಸಿಕೆ.
ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಪ್ರಶಾಂತ್ ಕುಮಾರ್ ಹೀಲಲಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಎಸ್ . ದಿನೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅದೇ ರೀತಿ ಗೀತರಚನೆಕಾರ ಹೃದಯ ಶಿವ ಸಾಹಿತ್ಯ, ಸಂಗೀತದ ಜೊತೆಗೆ ಸಂಭಾಷಣೆಯನ್ನು ಈ ಚಿತ್ರಕ್ಕೆ ಒದಗಿಸುತ್ತಿದ್ದಾರೆ. ಇನ್ನು ಛಾಯಾಗ್ರಹಣದ ಹೊಣೆ ನಾಗಾರ್ಜುನ್.ಡಿ ಅವರದ್ದು.