‘ನಟ ಸಾರ್ವಭೌಮ’ ಜೊತೆ ಹಿರಿಯ ನಟಿ ಸರೋಜಾದೇವಿ

Published on

282 Views

‘ನಟ ಸಾರ್ವಭೌಮ’ ಜೊತೆ ಹಿರಿಯ ನಟಿ ಸರೋಜಾದೇವಿ
ವಿಧಾನಸಭೆ ಚುನಾವಣೆ ಕಾವು ಮುಗಿಯುತ್ತಿದ್ದಂತೆ ಸ್ಯಾಂಡಲ್‍ವುಡ್ ಮಂದಿ ಮತ್ತೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿನಯದ ಸಾರ್ವಭೌಮ ಚಿತ್ರದ ಎರಡನೇ ಶೆಡ್ಯೂಲ್ ಶೂಟಿಂಗ್ ಇಂದು ಪ್ರಾರಂಭವಾಗಿದೆ.

ರಾಕ್ ಲೈನ್ ಪೆÇ್ರಡಕ್ಷನ್ ನಡಿಯಲ್ಲಿ ನಟಸಾರ್ವಭೌಮ ಶೂಟಿಂಗ್ ಮಾರ್ಚ್ ವೇಳೆಗೆ ಆರಂಭವಾಗಿತ್ತು. ಇದೀಗ ನೆಲಮಂಗಲ ಹತ್ತಿರ ಚಿತ್ರದ ಫೈಟಿಂಗ್ ದೃಶ್ಯ ಮತ್ತು ಕೆಲವು ಸನ್ನಿವೇಶಗಳು ಚಿತ್ರೀಕರಣಗೊಳ್ಳುತ್ತಿವೆ.
ಪುನೀತ್ ಅವರ ಜೊತೆ ಹಿರಿಯ ನಟಿ ಸರೋಜಾ ದೇವಿ ಕೂಡ ಇಂದು ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

ಬಾಹುಬಲಿ ಚಿತ್ರದ ಖ್ಯಾತಿಯ ಪ್ರಭಾಕರನ್ ಅವರು ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ನಾಯಕಿ ರಚಿತಾ ರಾಮ್. ಡಿ.ಇಮ್ಮಮ್ ಅವರ ಸಂಗೀತ ಮತ್ತು ವೈದಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com