“ಸಂಕಷ್ಟಕರ ಗಣಪತಿ” ಟ್ರೈಲರ್ ಬಿಡುಗಡೆ.

Published on

280 Views

ಈಗಾಗಲೇ ಒಂದೆರಡು ಕಿರುಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿರುವ ನಿರ್ದೇಶಕ ಅರ್ಜುನ್‍ಕುಮಾರ್ ಅವರು ತಮ್ಮ ಚಿತ್ರಕ್ಕೆ ಸಂಕಷ್ಟಕರ ಗಣಪತಿ ಎಂಬ ಟೈಟಲ್ ಇಟ್ಟು ಆ ಮೂಲಕ ವ್ಯಂಗ್ಯ ಚಿತ್ರಕಾರನೊಬ್ಬನ ಕಷ್ಟವನ್ನು ತೆರೆಯ ಮೇಲೆ ತೋರಿಸಲು ಮುಂದಾಗಿದ್ದಾರೆ. ಈ ಚಿತ್ರದ ಮೂಲಕ ಕಿರುತೆರೆಯಲ್ಲಿ ನಿರೂಪಕನಾಗಿರುವ ಲಿಖಿತಶೆಟ್ಟಿಯನ್ನು ಹೀರೋ ಮಾಡಲು ಹೊರಟಿದ್ದಾರೆ, ಲಿಖಿತ್ ಈಗಾಗಲೇ ಎರಡು ತುಳು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದಾನೆ. ಫೈಜಾನ್‍ಖಾನ್ , ರಾಜೇಶ್‍ಬಾಬು ಅವರು ಬಂಡವಾಳ ಹೂಡಿರುವ ಸಂಕಷ್ಟಕರ ಗಣಪತಿ ಚಿತ್ರದ ಟ್ರೈಲರ್ ಅನ್ನು ಮೊನ್ನೆ ಬಿಡುಗಡೆ ಮಾಡಲಾಯಿತು.ನಾಯಕ ಲಿಖಿತ್ ಶೆಟ್ಟಿ ಮಾತನಾಡಿ, ಯುಟಿವಿಯಲ್ಲಿ ನಿರೂಪಕರಾಗಿರುವ ನಾನು ಈ ಚಿತ್ರದ ಮೂಲಕ ನಾಯಕನಟನಾಗಿ ಪರಿಚಯವಾಗುತ್ತಿರುವುದು ಸಂತಸ ತಂದಿದೆ.

ನನ್ನ ಸ್ನೇಹಿತರಾದ ಫೈಜಲ್‍ಖಾನ್ ಅವರೇ ಅವರ ಗೆಳೆಯರನ್ನು ಒಗ್ಗೂಡಿಸಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಲೆಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ರೋಗ ಹೊಂದಿದ ಒಂದೆರಡು ಪೇಟೆಂಟ್ ಕಂಡು ಇದರ ಬಗ್ಗೆ ತಿಳಿದುಕೊಂಡೆವು ಎಂದು ಹೇಳಿದರು.ನಾಯಕಿ ಶೃತಿ ಮಾತನಾಡಿ, ಈ ಚಿತ್ರದಲ್ಲಿ ನಾನು ಮಾರಾಟ ಪ್ರತಿನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪತ್ರಿಕಾ ಕಚೇರಿಯಲ್ಲಿ ನಾಯಕನ ಪರಿಚಯ ಆಗುತ್ತದೆ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಮನುಷ್ಯನಿಗೆ ತನ್ನ ಕೈ ಮೇಲೆ ಹತೋಟಿ ಇಲ್ಲದಿದ್ದಾಗ ಆತ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ, ಅವನ ಬಾಳಿನಲ್ಲಿ ಹುಡುಗಿಯೊಬ್ಬಳ ಪ್ರವೇಶವಾಗಿ ಅದು ಪ್ರೇಮಕ್ಕೆ ತಿರುಗಿದ್ದಾಗ ಆತ ಏನೆಲ್ಲಾ ತೊಂದರೆಗಳನ್ನು ಪಡುತ್ತಾನೆ ಕೊನೆಗೆ ಆತ ಗಣೇಶನ ಮೊರೆ ಹೋದಾಗ ಸಂಕಷ್ಟಗಳು ಹೇಗೆ ಪರಿಹಾರವಾಗುತ್ತದೆ ಎಂಬುದನ್ನು ಎಳೆಯಾಗಿಟ್ಟುಕೊಂಡು ಈ ಚಿತ್ರವನ್ನು ಹೆಣೆಯಲಾಗಿದೆ.

ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಒಂದು ಹಾಡನ್ನು ಆಂಧ್ರದ ದಂಡಿಕೋಟದಲ್ಲಿ ಚಿತ್ರೀಕರಿಸಿದ್ದಾರೆ, ಉಳಿದ ಭಾಗಗಳ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ಮಾಡಿದ್ದು ಈ ಚಿತ್ರದ ಡಿಐ ರೀರೆಕಾರ್ಡಿಂಗ್ ನಡೆಯುತ್ತಿದ್ದುಘಿ, ಮುಂದಿನ ಎರಡು ವಾರಗಳಲ್ಲಿ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಲಿದೆ.ರಿತ್ವಿಕ್ ಮುರಳೀಧರ ಅವರ ಸಂಗೀತ ಸಂಯೋಜನೆ ಹಾಗೂ ಉದಯ ಲೀಲಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಒಂದು ವಿಶಿಷ್ಟ ಕಾನ್ಸೆಪ್ಟ್‍ನೊಂದಿಗೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಹೊರಟಿರುವ ಚಿತ್ರತಂಡದ ಕಷ್ಟಗಳನ್ನು ಆ ಗಣೇಶ ದೂರ ಮಾಡಿ ಯಶಸ್ಸನ್ನು ತಂದುಕೊಡುವಂತಾಗಲಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com