ಮ್ಯಾಜಿಕಲ್ ವಾಯ್ಸ್ ಸಂಜಿತ್ ಹೆಗ್ಡೆ ಧ್ವನಿಯಲ್ಲಿ ಕಾಲವೇ ಮೋಸಗಾರ ಸಿನೆಮಾ ಹಾಡು.

Published on

596 Views

ಸಂಜಯ್ ವಾದತ್ ಎಂಬ ಬಹುಮುಖ ಪ್ರತಿಭೆ ನಿರ್ದೇಶನ ಮಾಡಿರೋ ಕಾಲವೇ ಮೋಸಗಾರ ಸಿನೆಮಾದ ಮತ್ತೊಂದು ಹಾಡು ಬಿಡುಗಡೆಯಾಗಿದ್ದು, ಕೇಳುಗರ ಪ್ರಶಂಸೆಗೆ ಪಾತ್ರವಾಗಿದೆ. ಮ್ಯಾಜಿಕಲ್ ವಾಯ್ಸ್ ಸಂಜೀತ್ ಹೆಗ್ಡೆ ಧ್ವನಿಯಲ್ಲಿ ಮೂಡಿ ಬಂದಿರುವ ಈ “ಏನಿದು ಜಗವೇ ಹೊಸದು” ಹಾಡನ್ನು ಕವಿರತ್ನ ವಿ ನಾಗೇಂದ್ರ ಪ್ರಸಾದ್ ಅವರು ಬರೆದಿದ್ದಾರೆ.

ಹೊಸತನದ ಈ ಹಾಡಿಗೆ ಕೇಳುಗರು ಫಿದಾ ಆಗಿದ್ದು, ಸಂಜಿತ್ ಮತ್ತು ನಾಗೇಂದ್ರ ಪ್ರಸಾದ್ ಕಾಂಬಿನೇಷನ್ ವರ್ಕ್ ಆಗಿದ್ದು, ಕೆ ಲೋಕೇಶ್ ಸಂಗೀತ ಹೊಸದಾಗಿದೆ.
ಮೆಲೋಡಿ ಯಾಗಿ ಸಾಗುವ ಹಾಡಿನಲ್ಲಿ , ಮ್ಯೂಸಿಕ್ ತಕ್ಕಂತೆ ಅಭಿನಯಿಸಿದ್ದಾರೆ ಹೊಸ ಜೋಡಿ. ಭರತ್ ಸಾಗರ್, ಯಶಸ್ವಿನಿ ರವೀಂದ್ರ ಚಿತ್ರದ ನಾಯಕ ನಾಯಕಿ ಯಾಗಿ ತುಂಬಾನೇ ಚೆನ್ನಾಗಿ ನಟಿಸಿದ್ದು, ಹೊಸಬರು ಅನ್ನೋ ಸುಳಿವು ಸಿಗದ ರೀತಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ತಾರಾಗಣದಲ್ಲಿ ಶಂಕರ ಮೂರ್ತಿ , ಕುರಿ ಪ್ರತಾಪ್, ಬ್ಯಾಂಕ್ ಜನಾರ್ಧನ್, ವಿಜಯ್ ಚೆಂಡುರ್ ಅಭಿನಯಿಸಿದ್ದಾರೆ.

ಭಾವ ಸ್ಪಂದನ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನೆಮಾಕ್ಕೆ ರಜತ್ ಸಲಂಕೆ ಬಂಡವಾಳ ಹೂಡಿದ್ದು, ಸಿನೆಮಾ ತೆರೆಗೆ ಬರಲು ಸಜ್ಜಾಗಿ ನಿಂತಿದೆ. ಬಹುಭಾಷೆಯಲ್ಲಿ ತಯಾರಾಗಿರುವ ಈ ಸಿನಿಮಾದ ಮೇಲೆ ಚಂದನವನದಲ್ಲಿ ಬಾರಿ ನಿರೀಕ್ಷೆ ಇದೆ.

ಸಾಂಗ್:

Copyright ©2026 . All Rights Reserved. privacy | terms Whatsapp: 9538193653 Email: hello@flixoye.com