ಸಂಜಿತ್ ಹೆಗಡೆನೂ ಬಿಟ್ಟಿಲ್ಲ ಹ್ಯಾಂಗೋವರ್

Published on

290 Views

ಸಂಜಿತ್ ಹೆಗಡೆ ಸಧ್ಯಕ್ಕೆ ಹ್ಯಾಂಗೋವರ್ನಲ್ಲಿದಾರೆ.. ಹೌದು ಸರಿಗಮಪ ಮೂಲಕ ಹೊರಬಂದ ಹಾಡುಗಾರ ಚಮಕ್, ಕಾಲೇಜ್ ಕುಮಾರ ಚಿತ್ರಗಳಲ್ಲಿ ಹಾಡಿ, ಮೋಡಿ ಮಾಡಿದ ಮೋಡಿಗಾರ ಹ್ಯಾಂಗೋವರ್ ಚಿತ್ರಕ್ಕೆ ರಾಕ್ ಸೈಲಲ್ಲಿರುವ ಹಾಡೊಂದನ್ನು ಹಾಡಿದ್ದಾರೆ. ವೀರ್ ಸಮರ್ಥ್ ಅವರ ಕಂಪೋಜಿಷóನ್ನಲ್ಲಿ ಮೂಡಿ ಬಂದ ಈ ಹಾಡನ್ನು ಚೇತನ್ ಬಹದ್ದೂರ್ ಬರೆದಿದ್ದಾರೆ.

“ದಿನವೂ ಒಂದು ರೋಚಕ.. ಹುಡುಕೋ ಒಳ್ಳೆ ಕೌತುಕ.. ಸ್ನೇಹ ಅತಿ ಭಾವುಕ.. ಪ್ರೀತಿ ಮನ ಮೋಹಕ..” ಎನ್ನುತ್ತಾ ಚಿತ್ರದಲ್ಲಿ ಮೂವರು ನಾಯಕರು ಮತ್ತು ಮೂವರು ನಾಯಕಿಯರು ಜರ್ನಿ ಮಾಡುತ್ತಾ ಹಾಡುವ ಫ್ರೇಡ್‍ಷಿಪ್ ಹಾಡಿದು. ಸಂಜಿತ್ ಜೊತೆ ರಾಕ್ ಸಿಂಗರ್ ಧೀರೇಂದ್ರ ಅವರು ಕೂಡ ಸಾತ್ ಕೊಟ್ಟಿದ್ದಾರೆ.

“ಮೊಜು ಮಸ್ತಿಯ ಹುಚ್ಚು.. ಮರುಕಳಿಸಲಿ ಅತೀ ಹೆಚ್ಚು.. ಎಣಿಸುತಿದೇ ಈ ವಾಚು” ಎಂದು ಸಾಗುವ ಹ್ಯಾಂಗೋವರ್ ಜರ್ನಿಯನ್ನು ಹೇಳುವ ಸುಚಿವೇಷನ್ ಹಾಡಿದು. ಸಧ್ಯದಲ್ಲೇ ಹಾಡುಗಳು ಸಿ ಮ್ಯೂಜಿಕ್ ಸಂಸ್ಥೆಯ ಮೂಲಕ ಸಂಗೀತ ಪ್ರೇಮಿಗಳ ಮನಮುಟ್ಟಿಲಿದೆ.

ರಮನೀ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್ ಡಿ ರವರು ನಿರ್ಮಿಸಿ, ವಿಠಲ್ ಭಟ್ ನಿರ್ದೇಶಿಸಿದ ಹ್ಯಾಂಗೋವರ್ ಮುಂದಿನ ತಿಂಗಳು ಬಿಡುಗಡೆ ಮಾಡುವ ಎಲ್ಲಾ ತಯಾರಿ ನಡೆಸುತ್ತಿದೆ ಚಿತ್ರತಂಡ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com