ಪ್ರೊಡಕ್ಷನ್ ಹೌಸ್ ಆರಂಭಿಸಿದ ಸಂಗೀತ ಭಟ್

Published on

354 Views

ಬುಧವಾರ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸಂಗೀತಭಟ್ , ಹುಟ್ಟುಹಬ್ಬದ ದಿನದಂದು ಅವರದೇ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ. ಹೊಸ ಕನಸುಗಳೊಂದಿಗೆ ಪ್ರೊಡಕ್ಷನ್ ಹೌಸ್ ಆರಂಭಿಸಿರುವ ಸಂಗೀತ, ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಕಿರುಚಿತ್ರಗಳ ನಿರ್ಮಾಣದ ಯೋಜನೆಯಲ್ಲಿದ್ದಾರೆ. ಈಗಾಗಲೇ ಕನ್ನಡದ ಹಲವು‌ ನಟಿಯರು ಕಿರುಚಿತ್ರ ನಿರ್ಮಾಣ ಮಾಡಿ ಸುದ್ದಿ ಮಾಡಿದ್ದಾರೆ. ಅದರ ಬೆನ್ನಲ್ಲೇ ಸಂಗೀತ ಭಟ್ ಕೂಡ ಕಿರುಚಿತ್ರ ನಿರ್ಮಾಣದತ್ತ ಆಸಕ್ತಿವಹಿಸಿ ಈ ಹೆಜ್ಜೆಯಿಟ್ಟಿದ್ದಾರೆ. ಒಳ್ಳೆ ಮೆಸೇಜ್ ಕೊಡುವಂತಹ ೨-೩ ನಿಮಿಷಗಳ ವಿಡಿಯೋಗಳನ್ನು ಮಾಡುವವರಿಗೆ ಸಂಗೀತ ಭಟ್ ಆರಂಭ ಮಾಡಿರುವ ಸ್ರ್ಕಾಬೆಲ್ ಪ್ರೊಡಕ್ಷನ್ಸ್‌ ನಲ್ಲಿ ಅವಕಾಶವಿದೆ. ಈಗಾಗಲೇ ನಾಯಕ ನಟಿಯಾಗಿ ಗುರುತಿಸಿಕೊಂಡಿರುವ‌ ಸಂಗೀತಾ ಭಟ್ ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಕಿರುಚಿತ್ರದ‌ ಜೊತೆಗೆ ಸಿನಿಮಾ ನಿರ್ಮಾಣ ಮಾಡುವಂತಾಗಲಿ ಎಂದು ಆಶಿಸೋಣ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com