ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ : ರಾಘವೇಂದ್ರ ರಾಜಕುಮಾರ್, ಮೇಘನಾ ರಾಜ್ ಗೆ ಉತ್ತಮ ನಟ, ನಟಿ ಪ್ರಶಸ್ತಿ.
2018 ರ ಕರ್ನಾಟಕ ರಾಜ್ಯದ ಚಲನಚಿತ್ರಗಳ ರಾಜ್ಯ ವಾರ್ಷಿಕ ಚಲನ ಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಸಿನಿಮಾ ನಟ ನಟಿಯರಿಗೆ ಹಾಗೂ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆಯುವವರಿಗೆ, ಈ ಪ್ರಶಸ್ತಿಗಳು ಮುಂದೆ ಇನ್ನೂ ಉತ್ತಮವಾದ ಕಾರ್ಯ ನಿರ್ವಹಣೆ ಸ್ಪೂರ್ತಿ ಹಾಗೂ ಪ್ರೇರಣೆಯನ್ನು ನೀಡುತ್ತದೆ. ಈ ಬಾರಿ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡ ಸಿನಿಮಾಗಳು, ನಟ, ನಟಿಯರು ಹಾಗೂ ಚಿತ್ರ ತಂಡಕ್ಕೆ ಶುಭಾಶಯವನ್ನು ಕೋರುತ್ತಾ ಪ್ರಶಸ್ತಿ ಪಡೆದವರು ಯಾರು ಯಾರೆಂಬುದನ್ನು ತಿಳಿಯೋಣ ಬನ್ನಿ.
2018 ರ ಮೊದಲನೇ ಅತ್ಯುತ್ತಮ ಸಿನಿಮಾ ಆಗಿ ಪ್ರಶಸ್ತಿಯನ್ನು ಪಡೆದಿರುವ ಸಿನಿಮಾ ಆ ಕರಾಳ ರಾತ್ರಿ.
ಎರಡನೇ ಅತ್ಯುತ್ತಮ ಚಿತ್ರ- ರಾಮನ ಸವಾರಿ
ಮೂರನೇ ಅತ್ಯುತ್ತಮ ಚಿತ್ರ- ಒಂದಲ್ಲಾ ಎರಡಲ್ಲಾ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ಕಾಸರಗೋಡು
ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ)- ರಾಘವೇಂದ್ರ ರಾಜ್‍ಕುಮಾರ್ (ಅಮ್ಮನ ಮನೆ)
ಅತ್ಯುತ್ತಮ ನಟಿ- ಮೇಘನಾ ರಾಜ್ ( ಇರುವುದೆಲ್ಲವ ಬಿಟ್ಟು)
ಡಾ. ರಾಜ್‍ಕುಮಾರ್ ಪ್ರಶಸ್ತಿ- ಶ್ರೀನಿವಾಸ ಮೂರ್ತಿ
ಅತ್ಯುತ್ತಮ ಪೋಷಕ ನಟ- ಬಾಲಾಜಿ ಮನೋಹರ್ (ಚೂರಿ ಕಟ್ಟೆ)
ಅತ್ಯುತ್ತಮ ಪೋಷಕ ನಟಿ- ವೀಣಾ ಸುಂದರ್ (ಆ ಕರಾಳ ರಾತ್ರಿ)
ಅತ್ಯುತ್ತಮ ಬಾಲ ನಟ- ಮಾಸ್ಟರ್ ಆ್ಯರೆನ್ (ರಾಮನ ಸವಾರಿ)
ಅತ್ಯುತ್ತಮ ಬಾಲ ನಟಿ- ಬೇಬಿ ಸಿಂಚನ (ಅಂದವಾದ)
ಅತ್ಯುತ್ತಮ ಸಂಗೀತ ನಿರ್ದೇಶನ- ರವಿ ಬಸ್ರೂರು (ಕೆಜಿಎಫ್)
ಅತ್ಯುತ್ತಮ ಹಿನ್ನೆಲೆ ಗಾಯಕ- ಸಿದ್ಧಾರ್ಥ ಬೆಳ್ಮಣ್ಣು (ಇರುಳ ಚಂದಿರನ)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಕಲಾವತಿ ದಯಾನಂದ(ದೇಯಿ ಬೈದೇತಿ)
ಅತ್ಯುತ್ತಮ ಕಲಾ ನಿರ್ದೇಶನ -ಶಿವಕುಮಾರ್ ಕೆ. (ಕೆಜಿಎಫ್)
ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು ರಾಜ್ಯ ಪ್ರಶಸ್ತಿ ಪಡೆದಿರುವ ಎಲ್ಲಾ ಕಲಾವಿದರ ಹಾಗೂ ಚಿತ್ರ ತಂಡದಲ್ಲಿ ವಿವಿಧ ಕಾರ್ಯ ನಿರ್ವಹಣೆಯ ಜವಾಬ್ದಾರಿ ಹೊತ್ತವರಿಗೆ ಈ ಪ್ರಶಸ್ತಿಗಳು ಅವರ ಶ್ರಮಕ್ಕೆ ಸಿಕ್ಕ ಪ್ರತಿ ಫಲವಾಗಿದೆ.