ಮೇಘನಾರಾಜ್ ಮನೆಗೆ ಭೇಟಿಕೊಟ್ಟ ಹಿರಿಯನಟಿಯರು

Published on

372 Views

ಚಿರಂಜೀವಿ ನಿಧನದ ನಂತರ ಮೇಘನಾ ರಾಜ್ ತವರು ಮನೆಯಲ್ಲಿದ್ದು, ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳಾರವರ ಆರೈಕೆಯಲ್ಲಿದ್ದಾರೆ.

ಇದೀಗ ಮೇಘನಾರಾಜ್ ಮನೆಗೆ ಹಿರಿಯ ನಟಿಯರಾದ ಶ್ರುತಿ ಸುಧಾರಣಿ, ಮಾಳವಿಕಾ ಅವಿನಾಶ್ ಹಾಗೂ ಶ್ರುತಿರವರ ಮಗಳು ಮಿಲಿ ಭೇಟಿ ಕೊಟ್ಟು ಗರ್ಭಿಣಿ ಮೇಘಾನ ರಾಜ್ ರವರ ಯೋಗಕ್ಷೇಮವನ್ನು ವಿಚಾರಿಸಿದರು. ಕೆಲವು ಗಂಟೆಗಳ ಕಾಲ ಮಾತುಕತೆ, ಹರಟೆ ಹೊಡೆಯುತ್ತ, ಎಲ್ಲರೂ ಒಟ್ಟಿಗೆ ಕೂತು ಮಸಾಲೆದೋಸೆ ಸವಿದಿದ್ದಾರೆ. ಇದೀಗ ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೇಘನಾರಾಜ್ ಅವರ ಮನೆಯಲ್ಲಿ ಕಳೆದ ಕ್ಷಣಗಳ ಪೋಟೋಗಳನ್ನು ಮಾಳವಿಕ ಅವಿನಾಶ್ ಅಪ್ ಲೋಡ್ ಮಾಡಿ ನಾನು ಬಾಲ ನಟಿಯಾಗಿದ್ದಾಗಿನಿಂದ ಸುಂದರ್ ರಾಜ್ ಅವರನ್ನು‌ ಬಲ್ಲೇ. ಚಿತ್ರರಂಗದಲ್ಲಿ ನಾವು ಒಟ್ಟಿಗೆ ಪ್ರಯಾಣಿಸಿದ್ದೇವೆ. ಎಂದು ಹೇಳಿದ್ದಾರೆ.
ಮೇಘನಾರಾಜ್ ಮನೆಗೆ ಭೇಟಿ ಕೊಟ್ಟಿರುವ ಕುರಿತು ಮಾಳವಿಕ ಅವಿನಾಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com