ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ 62 ನೇ ಹುಟ್ಟುಹಬ್ಬದ ಸಂಭ್ರಮ – ಸಾಲು ಸಾಲು ಸಿನಿಮಾ ಘೋಷಣೆ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 62ನೇ ಹುಟ್ಟುಹಬ್ಬದ ಸಂಭ್ರಮದ ದಿನದಂದೆ ಅನೇಕ ಹೊಸ ಸಿನಿಮಾಗಳು ಕೂಡ ಘೋಷಣೆ ಆಗುತ್ತಿದೆ.
ಸೂಪರ್ ಸ್ಟಾರ್ ರಜನಿಕಾಂತ್, ಧನುಷ್ ಜೊತೆಗೆ ಅಭಿನಯಿಸುವ ಮೂಲಕ ಶಿವರಾಜ್ ಕುಮಾರ್ ಈಗಾಗಲೇ ಕಾಲಿವುಡ್ ನಲ್ಲಿ ಯಶಸ್ವಿಯಾಗಿರುವುದು ನಮಗೆಲ್ಲ ತಿಳಿದಿರುವ ವಿಚಾರವೇ. ಹಾಗೆಯೇ ನಮ್ಮ ಕರುನಾಡ ಚಕ್ರವರ್ತಿ ಇದೀಗ ತೆಲುಗು ಚಿತ್ರರಂಗವನ್ನು ಪ್ರವೇಶಿಸುತ್ತಿರುವುದು ಬಹುತೇಕ ಕನ್ಫರ್ಮ್ ಆಗಿದೆ. ಹಾಗಾದ್ರೆ ಯಾವುದದು ಸಿನಿಮಾ? ನಟ ಯಾರು? ಎಂಬಿತ್ಯಾದಿ ವಿಚಾರಗಳಿಗಾಗಿ ಈ ವರದಿ ಓದಿ.
ಹೌದು, ನಮ್ಮ ಕರುನಾಡ ನಟ ಇದೀಗ ಆರ್.ಆರ್.ಆರ್ ಖ್ಯಾತಿಯ ರಾಮ್ ಚರಣ್ ಅವರ 16ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಉಪನ್ನ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದ ಇನ್ನೂ ಹೆಸರಿಡದ RC 16″ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಶಿವಣ್ಣ ಅಭಿನಯಿಸುತ್ತಿರುವುದು ಪಕ್ಕಾ ಆಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಚಿತ್ರ ತಯಾರಿಕ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಮಾಹಿತಿ ಹಂಚಿಕೊಳ್ಳುವ ಮುಖೇನ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.
Welcoming ‘Karunada Chakravarthy’ @NimmaShivanna on board for a pivotal role that resonates with his stature 🔥
Team #RC16 wishes #Shivanna a very Happy Birthday ✨#RamCharanRevolts
Global Star @AlwaysRamCharan #JanhviKapoor @BuchiBabuSana @arrahman @RathnaveluDop @artkolla… pic.twitter.com/gPmlgJ70xX— Mythri Movie Makers (@MythriOfficial) July 12, 2024
ವೆಂಕಟ ಸತೀಶ್ ಕಿಲಾರು ನಿರ್ಮಾಣದ ಈ ಚಿತ್ರಕ್ಕೆ ಸನಾ ಅವರದೇ ಚಿತ್ರಕಥೆ. ಇದನ್ನು ವೃದ್ಧಿ ಸಿನಿಮಾಸ್, ಸುಕುಮಾರ್ ರೈಟಿಂಗ್ಸ್ ಮತ್ತು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದ್ದು, ಸಂಗೀತ ಮಾಂತ್ರಿಕ ಎ.ಆರ್ .ರೆಹಮಾನ್ ಸಂಗೀತ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.