ಮಲಯಾಳಂ ನಟ ಮೋಹನ್ ಲಾಲ್ ಜೊತೆ ನಟಿಸಲಿರುವ ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್

ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಬಿಜಿಯಾಗಿರುವ ಅವರು ಇದೀಗ ಮೊದಲ ಬಾರಿಗೆ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ನಟನೆಯ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಇದರಲ್ಲಿ ಶ್ರದ್ಧಾ ಐಎಎಸ್ ಆಫೀಸರ್ ಆಗಿ ನಟಿಸಲಿದ್ದಾರೆ.
ಈ ಸಿನಿಮಾದ ಮೂಲಕ ಮಾಲಿವುಡ್ ನಲ್ಲೂ ಮಿಂಚಲು ರೆಡಿಯಾಗಿದ್ದಾರೆ ಶ್ರದ್ಧಾ ಶ್ರೀನಾಥ್. “ಈ ಚಿತ್ರದಲ್ಲಿ ನಾಯಕ ನಾಯಕಿ ಅಂತ ಏನು ಇರಲ್ಲ. ಇದರಲ್ಲಿ ನನ್ನದು ಪ್ರಮುಖ ಪಾತ್ರ ಸ್ಟ್ರಾಂಗ್ ಕ್ಯಾರೆಕ್ಟರ್ ಎಂಬ ಕಾರಣಕ್ಕೆ ಇದನ್ನು ಒಪ್ಪಿಕೊಂಡೆ. ನಾನು ಸಣ್ಣ ಪಾತ್ರದಿಂದ ಮಲಯಾಳಂ ಸಿನಿಮಾದಿಂದನೇ ನನ್ನ ಸಿನಿಮಾ ಕರಿಯರ್ ಪ್ರಾರಂಭ ಮಾಡಿದು. ಈಗ ಪ್ರಮುಖ ಪಾತ್ರದಲ್ಲಿ, ನಟಿಸುತ್ತಿದ್ದೇನೆ.
ಲಾಕ್ ಡೌನ್ ನಂತರ ಮಲಯಾಳಂ ಸಿನಿಮಾದ ಮೂಲಕ ಶೂಟಿಂಗ್ ನಲ್ಲಿ ಹಾಜರಾಗಲಿದ್ದೇನೆ’ ಎಂದಿದ್ದಾರೆ. ಮಾಧವನ್ ಮತ್ತು ವಿಶಾಲ್ ಜೊತೆ ನಟಿಸಿರುವ ಎರಡು ತಮಿಳು ಸಿನಿಮಾಗಳು ಹಾಗೂ ಕನ್ನಡದಲ್ಲಿ ‘ಗೋಧ್ರಾ’ ಸಿನಿಮಾವೂ ರಿಲೀಸ್ಗೆ ರೆಡಿಯಾಗಿದೆ. ಮಲಯಾಳಂ ಸಿನಿಮಾದಲ್ಲಿ ಮೋಹನ್ ಲಾಲ್ ರವರ ಜೊತೆ ನಟಿಸುವ ಅವಕಾಶ ದೊರಕಿದ್ದು ತುಂಬಾ ಖುಷಿಯಾಗಿದೆ. ಶೂಟಿಂಗ್ ನಲ್ಲಿ ಅವರ ಜೊತೆ ಸಮಯ ಕಳೆಯುವ ಅವಕಾಶ ಸಿಕ್ಕಿದೆ. ನಾನು ಅವರನ್ನೂ ಇದುವರೆಗೆ ಭೇಟಿಯಾಗಿಲ್ಲ. ಆದ್ದರಿಂದ ಕಾತುರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ ಶ್ರದ್ಧಾ ಶ್ರೀನಾಥ್.