ಎರಡೂವರೆ ತಿಂಗಳಿನಿಂದ ‌ಹಾಸಿಗೆ ಹಿಡಿದ ಸ್ಯಾಂಡಲ್ ವುಡ್ ನಟಿ…!!

Published on

384 Views

ಜುಲೈನಲ್ಲಿ ಯಲಹಂಕದ ಮಾವಳ್ಳಿ ಬಳಿ ರಿಷಿಕಾ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಅತಿವೇಗದಿಂದ ಬಂದು‌ ಮರಕ್ಕೆ ಅಪ್ಪಳಿಸಿದ್ದರಿಂದ ಕಾರಿನಲ್ಲಿ‌ದ್ದ ರಿಷಿಕಾ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಈಗ ಎರಡೂವರೆ ತಿಂಗಳಿಂದ ಆಸ್ಪತ್ರೆ ಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ರಿಷಿಕಾರವರ ಆರೋಗ್ಯ ದಲ್ಲಿ ಯಾವುದೇ ಚೇತರಿಕೆ ‌ಕಂಡು ಬಂದಿಲ್ಲ. ರಿಷಿಕಾ ಸಿಂಗ್ ಖಾಸಗಿ ಆಸ್ಮತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ. ಚೇತರಿಕೆ ಕಂಡು‌ ಬರದ ಹಿನ್ನೆಲೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

2012 ರಲ್ಲಿ ಬೆಂಗಳೂರಿನ‌ ಉದ್ಯಮಿ ಸಂದೀಪ್ ರವರೊಂದಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಕೆಲವು‌ ಕಾರಣಗಳಿಂದ ಮದುವೆಯೂ ರದ್ದಾಗಿತ್ತು. ಇದ್ದರಿಂದ ಖಿನ್ನತೆ ಗೆ ಒಳಗಾಗಿದ್ದ ರಿಷಿಕಾರವರು ಆ ಸಮಯದಲ್ಲೂ ಆಸ್ಪತ್ರೆ ಗೆ ದಾಖಲಾಗಿದ್ದರು. 2011 ರಲ್ಲಿ ಕಂಠೀರವ ಸಿನಿಮಾದ ಮೂಲಕ ನಾಯಕಿಯಾಗಿ‌ ತೆರೆಗೆ ಬಂದ ರಿಷಿಕಾ ಸಿಂಗ್, ನಂತರ 3-4 ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ರಿಷಿಕಾ ಸಿಂಗ್ ಹಿರಿಯ ನಿರ್ದೇಶಕ, ನಿರ್ಮಾಪಕ ರಾದ ರಾಜೇಂದ್ರ ಸಿಂಗ್ ಬಾಬು ಪುತ್ರಿ ಹಾಗೂ ನಟ ಆದಿತ್ಯ ರವರ ಸಹೋದರಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com