‘ಪುಕ್ಸಟ್ಟೆ ಲೈಫ್’ ಸಿನಿಮಾದಲ್ಲಿ ಸಂಚಾರಿ ವಿಜಯ್ ಬೀಗ ರಿಪೇರಿ

Published on

490 Views

ರಾಷ್ಟ್ರ ಪ್ರಶಸ್ತಿ ವಿಜೇತ ದಿವಂಗತ ನಟ ಸಂಚಾರಿ ವಿಜಯ್ ಅಭಿನಯದ ‘ಪುಕ್ಸಟ್ಟೆ ಲೈಫ್’ ಸಿನಿಮಾ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ವೈವಿದ್ಯಮಯ ಚಿತ್ರ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದ ಸಂಚಾರಿ ವಿಜಯ್ ‘ಪುಕ್ಸಟ್ಟೆ ಲೈಫ್ ‘ಸಿನಿಮಾದಲ್ಲೂ ಒಂದು ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ.


ಅರವಿಂದ್ ಕೋಪ್ಲಿಕರ್ ನಿರ್ದೇಶನದ ಮೊದಲ ಸಿನಿಮಾ ‘ಪುಕ್ಸಟ್ಟೆ ಲೈಫ್’. ಬಹುಮುಖ ಪ್ರತಿಭೆಯಾದ ಇವರು ಮೂಲತಃ ರಂಗಭೂಮಿ ಕಲಾವಿದರು. ಹಲವು ಸಿನಿಮಾಗಳಿಗೆ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ನಿರ್ದೇಶಕರಾಗಿ ದುಡಿದ ಅನುಭವ ಇವರಿಗಿದೆ. ಹರಿವು, ಇದೊಳ್ಳೆ ರಾಮಾಯಣ ಸಿನಿಮಾಗಳಲ್ಲಿ ಉತ್ತಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಕಿರುಚಿತ್ರ ನಿರ್ದೇಶನದಲ್ಲೂ ಗಮನ ಸೆಳೆದಿದ್ದಾರೆ ಅರವಿಂದ್ ಕೋಪ್ಲಿಕರ್. ಈಗ ಮೊದಲ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಒಬ್ಬ ಮಧ್ಯಮ ವರ್ಗದ ವ್ಯಕ್ತಿ ದುಡ್ಡಿನ ಹಿಂದೆ ಬಿದ್ದರೆ ಯಾವೆಲ್ಲ ಸಮಸ್ಯೆ ಎದುರಾಗುತ್ತೆ ಎನ್ನುವ ಕಥಾಹಂದರ ಪುಕ್ಸಟ್ಟೆ ಲೈಫ್ ಚಿತ್ರದಲ್ಲಿದೆ. ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರದ ಮೂಲಕ ಎದುರುಗೊಳ್ಳುವ ಸಂಚಾರಿ ವಿಜಯ್ ಈ ಸಿನಿಮಾದಲ್ಲಿ ಬೀಗ ರಿಪೇರಿ ಮಾಡುವ ಕೆಳ ಮಧ್ಯಮ ವರ್ಗದ ಮುಸ್ಲಿಂ ಯುವಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾತಂಗಿ ಪ್ರಸನ್ನ ಚಿತ್ರದ ನಾಯಕಿ. ರಂಗಾಯಣ ರಘು, ಅಚ್ಯುತ್ ಕುಮಾರ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ಸಂಚಾರಿ ಥಿಯೇಟರ್ ನಲ್ಲಿರುವ ನಟರು, ತಂತ್ರಜ್ಞರು ಸೇರಿ ‘ಪುಕ್ಸಟ್ಟೆ ಲೈಫ್’ ಸಿನಿಮಾ ಮಾಡಿರೋದು ಚಿತ್ರದ ಮತ್ತೊಂದು ವಿಶೇಷ. ಸರ್ವಸ್ವ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಾಗರಾಜ್ ಸೋಮಯಾಜಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com