ಅಂಧನ ಪಾತ್ರದಲ್ಲಿ ಸಂಚಾರಿ ವಿಜಯ್

Published on

495 Views

ಅಂಧನ ಪಾತ್ರದಲ್ಲಿ ಸಂಚಾರಿ ವಿಜಯ್

ನಟ ಸಂಚಾರಿ ವಿಜಯ್ ನಟಿಸಿರುವ ಬಿಡುಗಡೆಗೆ ತಯಾರಾಗಿರುವ ‘ಕೃಷ್ಣ ತುಳಸಿ’ ಚಿತ್ರದಲ್ಲಿ ಸಂಚಾರಿ ವಿಜಯ್ ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಅದರೊಂದಿಗೆ ಟೂರಿಸ್ಟ್ ಗೈಡ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಈಗಾಗಲೇ ಜನ ಮೆಚ್ಚುಗೆ ಗಳಿಸಿದ್ದು, ಚಿತ್ರದಲ್ಲಿರುವ ‘ಲೋಕಾನ‌ ನಮ್ಮಂಗೆ ನೋಡೋರು ಯಾರು ಇಲ್ಲ’ ಹಾಡಿನ ಮೇಕಿಂಗ್ ವಿಶೇಷವಾಗಿದ್ದು, ಹಾಡಿನಲ್ಲಿ ಮೊದಲ ಬಾರಿಗೆ ನೂರಾರು ಕಣ್ಣು ಕಾಣದ ಯವಕರು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ದೃಷ್ಟಿ ಕಳೆದುಕೊಂಡ ಹುಡುಗನ ಕತೆ ಇದಾಗಿದ್ದು, ಚಿತ್ರವನ್ನು ಸುಖೇಶ್ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲೇ ವಿಶಿಷ್ಟ ಕಥಾವಸ್ತುವನ್ನು ತೆಗೆದುಕೊಂಡು ನಿರ್ದೇಶನ ಮಾಡುತ್ತಿದ್ದಾರೆ. ಕಣ್ಣಿಲ್ಲದವರ ಬದುಕು ಹೇಗಿರುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇನೆ ಎನ್ನುತ್ತಾರೆ ಸುಖೇಶ್. ಚಿತ್ರದಲ್ಲಿ ಕೃಷ್ಣನಾಗಿ ವಿಜಯ್, ತುಳಸಿಯಾಗಿ ಮೇಘಶ್ರೀ ನಟಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com